Home » ಮಾಯದಂತ ಮಳೆಯು ಬಂತಣ್ಣ….
 

ಮಾಯದಂತ ಮಳೆಯು ಬಂತಣ್ಣ….

ಪುನರ್ವಸು ಮಳೆಗೆ ಕತ್ತರಿಸಿದ ಉಡುಪಿ ಜಿಲ್ಲೆ

by Kundapur Xpress
Spread the love

ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಭಾರಿ ಮಳೆಗೆ 32 ಮನೆಗಳು ಎರಡು ಜಾನುವಾರು ಕೊಟ್ಟಿಗೆಗಳು ಹಾಗೂ ಒಂದು ಮನೆ ಸಂಪೂರ್ಣ ನೆಲಕಚ್ಚಿದೆ ಎಂದು ತಿಳಿದುಬಂದಿದೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಯಶೋಧ ಎಂಬ ಅವರ ಮನೆ ಮೇಲೆ ಮರ ಉರುಳಿ ಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ ಉಡುಪಿಯ ಅಜ್ಜರ ಕಾಡಿನಲ್ಲಿ ಬಿಎಸ್ಎನ್ಎಲ್ ಕ್ವಾಟ್ರಸ್ ಬಳಿಯಲ್ಲಿ ಬೃಹತ್‌ ಗಾತ್ರದ ಮಾವಿನ ಮರ ಒಂದು ಉರುಳಿ ಬಿದ್ದಿದೆ

ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮಾಚಿ ಪೂಜಾರಿ ಎಂಬುವವರ ಜಾನುವಾರ ಕೊಟ್ಟಿಗೆ ಕುಸಿದು ಬಿದ್ದು 15,000 ನಷ್ಟ ಉಂಟಾಗಿದ್ದು ಉಡುಪಿ ಜಿಲ್ಲೆಯಾದ್ಯಂತ ಒಟ್ಟು 10 ಲಕ್ಷದ 60 ಸಾವಿರ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ

ಕುಂದಾಪುರ ನಗರದ ಹಲವು ರಸ್ತೆಗಳಲ್ಲಿ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ನಗರದ ನಂದಿಬೆಟ್ಟು ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನ ಎದುರುಗಡೆಯಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿ ಅನಾಹುತ ಉಂಟು ಮಾಡಿದೆ ಈ ಬಾರಿಯೂ ಬೈಂದೂರಿನ ಒತ್ತಿನಣೆ ಗುಡ್ಡವು ಕುಸಿದಿದ್ದು ಬೃಹತ್ ಗಾತ್ರದ ಬಂಡೆಯೊಂದು ಹೆದ್ದಾರಿಗೆ ಉರುಳುವ ಹಂತದಲ್ಲಿದೆ ಕುಂದಾಪುರದ ಸಹಾಯಕ ಕಮಿಷನರ್ ರಶ್ಮಿ ಎಸ್ಆರ್ ಅವರು ಗುರುವಾರ ಮಳೆಯಿಂದ ಹಾನಿಗೆ ಒಳಗಾದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳಿಗೆ ಸೂಚನೆ ನೀಡಿದ್ದಾರೆ

   

Related Articles

error: Content is protected !!