ಚಿಕ್ಕಮಗಳೂರು: ಹೆಲೈಟ್ ಧರಿಸದ ಕಾರಣಕ್ಕೆ ಯುವ ವಕೀಲರೊಬ್ಬರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ ಆರೋಪದ ಮೇಲೆ ನಗರ ಠಾಣೆಯ ಪಿಎಸ್ಐ ಸೇರಿದಂತೆ 6 ಪೊಲೀಸ್ ಸಿಬ್ಬಂದಿಯನ್ನು ಅಮಾನತುಪಡಿಸಿ ಎಸ್ಪಿ ವಿಕ್ರಮ ಆಮಟೆ ಆದೇಶಿಸಿದ್ದಾರೆ. ಪಿಎಸ್ಐ ಮಹೇಶ್ ಪೂಜಾರಿ, ಎಎಸ್ಐ ರಾಮಪ್ಪ ಮುಖ್ಯ ಪೇದೆ ಗುರುಪ್ರಸಾದ್ ಹಾಗೂ ಪೇದೆಗಳಾದ ಯುವರಾಜ್, ಶಶಿ ಮತ್ತು ಮಹೇಶ್ ಅಮಾನತುಗೊಂಡವರು, ಎಲ್ಲರ ವಿರುದ್ಧ ಕೊಲೆ ಯತ್ನ ಸೇರಿ ವಿವಿಧ ಪ್ರಕರಣ ದಾಖಲಿಸಲಾಗಿದೆ