411
ಕುಂದಾಪುರ : ನಗರದ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಮೈಲಾರೇಶ್ವರ ಯುವಕ ಮಂಡಲದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ರಾವ್ ಧ್ವಜಾರೋಹಣವನ್ನು ನೆರವೇರಿಸಿ ಸರ್ವರಿಗೂ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭ ಕೋರಿದರು
ವೇದಿಕೆಯಲ್ಲಿ ಶಂಕರ್ ಕುಂದಾಪುರ ಲಕ್ಷ್ಮೀನಾರಾಯಣ ಕಸ್ತೂರಿ ಕಾರ್ಯದರ್ಶಿ ಕೆ ಪಿ ಸುಧೀರ್ ಉಪಸ್ಥಿತರಿದ್ದರು ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ರಾವ್ ರವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು ಗಣೇಶ್ ನಾಯಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೆ ಪಿ ಸುಧೀರ್ ಧನ್ಯವಾದವಿತ್ತರು

