ಕುಂದಾಪುರ : ಕುಂದಾಪುರದ ತ್ರಿವರ್ಣ ಕಲಾ ಕೇಂದ್ರದ ಕಿರಿಯರ ವಿಭಾಗದ ಆಯ್ದ ವಿದ್ಯಾರ್ಥಿಯರಿಂದ ಕೋಡಿ ಕಿನಾರ ಕಡಲ ತೀರದಲ್ಲಿ ಗಣಪತಿಯ ಮರಳು ಶಿಲ್ಪ ರಚನೆ ಮಾಡಲಾಯಿತು
ಪ್ರಥಮ ಪೂಜಿತ, ಜ್ಞಾನ ಮತ್ತು ಬುದ್ದಿಯ ಅಧಿಪತಿ, ಗಣಗಳ ಒಡೆಯನಾದ ಗಣೇಶನ ಹಬ್ಬದ ಆಚರಣೆಯ ಈ ಸುಸಂದರ್ಭದಲ್ಲಿ ಗಣೇಶನ ಮರಳು ಶಿಲ್ಪ ಕಲಾಕೃತಿಯು ತ್ರಿವರ್ಣ ಕಲಾ ಕೇಂದ್ರದ 15 ವಿದ್ಯಾರ್ಥಿಯರ ಕೈಯಲ್ಲಿ ಮೂಡಿ ಬಂತು
ಮೋದಕ ಪ್ರಿಯ ಸೊಂಡಿಲ ಬಾಲಗಣಪ ಪ್ರಕೃತಿ ಮಡಿಲಲ್ಲಿ ಬುದ್ದಿಯ ಪ್ರತೀಕವಾಗಿ ಮೂಷಿಕ ವಾಹನವನ್ನು ವಿಶ್ವ ಪರ್ಯಾಟನೆಯ ಸಂಕೇತವಾಗಿ ಶಿವಲಿಂಗದೊಂದಿಗೆ ಬಣ್ಣದ ಮೂಲಕ ಕಂಗೊಳಿಸುವ “ವರ್ಣ ವಿನಾಯಕ ” ಎಂಬ ಶೀರ್ಷಿಕೆಯಡಿಯಲ್ಲಿ 4 ಅಡಿ ಎತ್ತರ ಮತ್ತು 9 ಅಡಿ ಅಗಲಗಳುಳ್ಳ ಬಣ್ಣದ ಕಲಾಕೃತಿಯು ಕಲಾವಿದ ಹಾಗೂ ತ್ರಿವರ್ಣ ಕಲಾಕೇಂದ್ರದ ಮುಖ್ಯಸ್ಥರಾದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಚಿಸಲಾಯಿತು
ಇದರಲ್ಲಿ ಕಲಾಕೇಂದ್ರದ ವಿದ್ಯಾರ್ಥಿಗಳಾದ ಅದ್ವಿತ್ ಕುಮಾರ್, ಸಮೃದ್ಧಿ, ಕಾರ್ತಿಕ್ ಕೊತ್ವಲ್, ಯಶಸ್ ಕೆ. ಹೆಚ್., ಕೃತಿ ಕೆ.ದೇವಾಡಿಗ, ಸಮರ್ಥ್, ತನ್ಮಯ್ ಪಡ್ತೀ, ನಿಯತಿ ಎನ್. ಪೈ, ನಿಧಿ ವಿಜಯ್, ರಿತೇಶ್ ಪ್ರಭು, ನಿಶ್ಚಿತ ವಿ. ಹೆಚ್, ಸಾತ್ವಿಕ್ ಶೆಣೈ, ಪ್ರಣೀತ್ ಪಿ. ಶೆಟ್ಟಿ, ಯಶ್ಮಿತಾ ಜಿ.ರವರು ಭಾಗವಹಿಸಿದ್ದು ಶಿಕ್ಷಕಿ ಶ್ರೀಮತಿ ಚೇತನಾ ಜಿ. ಸಂತೋಷ್ ಹಾಲಾಡಿ ಸಹಕರಿಸಿದರು