Home » ಕಾನೂನು ಕ್ರಮಕ್ಕೆ ಆಗ್ರಹ ಮನವಿ
 

ಕಾನೂನು ಕ್ರಮಕ್ಕೆ ಆಗ್ರಹ ಮನವಿ

ರಾಸು ಕಳ್ಳತನ ಹಾಗೂ ನಿಯಮ ಮೀರಿ ಜಾನುವಾರು ಮಾರಾಟ

by Kundapur Xpress
Spread the love

ಕೋಟ : ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಈ ಹಿಂದೆ 5, 68,೦೦೦ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು ಪ್ರಸ್ತುತ 3,20,೦೦೦ ಲೀಟರ್ ಶೇಖರಣೆಯಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಗರಿಷ್ಟ2,20,,೦೦೦ ಲೀಟರ್ ಹಾಲು ಶೇಖರಣೆ ಇದ್ದು ಸರಾಸರಿ 1,80,೦೦೦ ಅದರಲ್ಲಿ1,60,000 ಲೀಟರ್ ಮಾರಾಟವಾಗುತ್ತಿದ್ದು ಪ್ರಸ್ತುತ 1,10,000 ಲೀಟರ್ ಶೇಖರಣೆಯಾಗುತ್ತಿದೆ.ಕಾರಣ ನಿಯಮ ಮೀರಿ ಹೊರಜಿಲ್ಲೆಗಳಿಗೆ ಜಾನುವಾರು ಮಾರಾಟ ಮಾಡುತ್ತಿದ್ದು ಇದರಿಂದ ಹಾಲು ಶೇಖರಣೆ ಕಡಿಮೆಯಾಗುತ್ತಿದೆ. ಗ್ರಾಹಕರಿಗೆ ಬೇಕಾಗುವಷ್ಟು ಹಾಲು ಮತ್ತು ಹಾಲಿನ ಉತ್ಪನ್ನ ನೀಡಲು ಸಾದ್ಯವಾಗುತ್ತಿಲ್ಲ ದಿನೇದಿನೇ ಹಾಲು ಶೇಖರಣೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ರಾಸುವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ನಿಯಮ ಸಡಿಲಗೊಳಿಸಬಾರದೆಂದು ಹಾಗೂ ರಾಸು ಕಳ್ಳತನವಾದಾಗ ಸೂಕ್ತ ಕ್ರಮ ಹಾಗೂ ಉಡುಪಿ ಜಿಲ್ಲೆಗಳಲ್ಲಿ ದಲ್ಲಾಳಿಗಳು ಮನೆಮನೆಗೆ ಬಂದು ರಾಸು ಮಾರಾಟಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ತಹಶೀಲ್ದಾರರು,ಪೋಲಿಸ್ ನಿರೀಕ್ಷಕರು.ಮತ್ತು ಪಶುವೈದ್ಯಾಧಿಕಾರಿಯವರು ಕಾನೂನು ಪ್ರಕಾರ ಜಾನುವಾರು ಸಾಗಾಟ ಮಾಡಲು ಅನುಮತಿಯನ್ನು ನೀಡುವಂತೆ ಬ್ರಹ್ಮಾವರ ತಾಲೂಕು ದಂಡಾಧಿಕಾರಿಗಳಿಗೆ ಸೇರಿದಂತೆ ಬ್ರಹ್ಮಾವರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಹಾಗೂ ಬ್ರಹ್ಮಾವರ ಸರ್ಕಲ್ ಇನ್ಸೆ÷್ಪಕ್ಟರ್ ದಿವಾಕರ್ ರವರಿಗೆ ಮನವಿ ನೀಡಿದರು.ಮನವಿ ಸಂದರ್ಭದಲ್ಲಿ ಬ್ರಹ್ಮಾವರ ಹಾಲು ನೌಕರರ ತಾಲೂಕು ಅಧ್ಯಕ್ಷ ರಾಕೇಶ್ ನಾಯಕ್ ಶಿರಿಯಾರ,ಹಂದಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸರಸ್ವತಿ ಮತ್ತಿತರರು ಇದ್ದರು.

   

Related Articles

error: Content is protected !!