Home » ಬಿಜೆಪಿಗೆ ಈಗ ಗುರುಗಳ ನೆನಪು
 

ಬಿಜೆಪಿಗೆ ಈಗ ಗುರುಗಳ ನೆನಪು

ಸತ್ಯಜಿತ್‌ ಆರೋಪ

by Kundapur Xpress
Spread the love

ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಕೇಂದ್ರ ಸರಕಾರವು ಗಣರಾಜ್ಯೋತ್ಸವ ದಿನದಂದು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ ಮಾಡಿದಾಗ, ರಾಜ್ಯದಲ್ಲಿ ಬಿಜೆಪಿ ಸರಕಾರವು ನಾರಾಯಣ ಗುರುಗಳ ಪಾಠವನ್ನು ಕೈಬಿಟ್ಟಾಗ, ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಬಿಜೆಪಿ ಮುಖಂಡರು ಮಾತಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿಗೆ ಈಗ ಚುನಾವಣೆ ಬಂದಾಗ ನಾರಾಯಣ ಗುರುಗಳ ನೆನಪಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.

ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜ ಬಿಜೆಪಿಯಿಂದ ಕೈಬಿಟ್ಟು ಹೋಗುತ್ತದೆ ಎಂಬ ಭಾವನೆ ಬಂದ ಕಾರಣದಿಂದ ಈಗ ಬಿಜೆಪಿಯು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದೆ ಎಂದರು.

2 ವರ್ಷದ ಹಿಂದೆ ಮಹಿಳಾ ಸಶಕ್ತಿಕರಣ ವಿಷಯದಲ್ಲಿ ಕೇರಳ ಸರಕಾರ ಕೇಂದ್ರಕ್ಕೆ ಕಳುಹಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲು ಅವಕಾಶ ನೀಡುತ್ತಿದ್ದರೆ ಅದು ನಾರಾಯಣ ಗುರುಗಳಿಗೆ ಸಿಗುವ ದೊಡ್ಡ ಗೌರವವಾಗುತ್ತಿತ್ತು. ಆದರೆ ಅಂದು ಅವಕಾಶ ನಿರಾಕರಣೆ ಮಾಡಿದಾಗ ಇಲ್ಲಿ ಸಮಾಜ ಪ್ರತಿಭಟನೆ ಮಾಡಿದಾಗ ಸ್ತಬ್ಧಚಿತ್ರದ ಅಳತೆ ಸರಿ ಇಲ್ಲ ಎಂಬಿತ್ಯಾದಿ ಹೇಳಿಕೆ ನೀಡಿ ಸಮಾಜದ ದಾರಿತಪ್ಪಿಸಲಾಗಿತ್ತು. ಸ್ಥಳೀಯ ಬಿಜೆಪಿ ಪ್ರಮುಖರು ಆಗ ಪತ್ರಿಕಾಗೋಷ್ಠಿ ನಡೆಸಿ ಬರುವ ವರ್ಷ ನಾವೇ ಸ್ತಬ್ಧಚಿತ್ರ ಮಾಡಿ ಕೊಡುತ್ತೇವೆ ಎಂದರೂ ಅದು ಇಲ್ಲಿಯವರೆಗೆ ಆಗಲೇ ಇಲ್ಲ. ಇದನ್ನು ‘ ಖಂಡಿಸಿ ನಾರಾಯಣ ಗುರುಗಳಿಗೆ ಅವಮಾನ ಆಗಿದೆ ಎಂಬ ನೋವಿನಿಂದ ಕರಾವಳಿಯಲ್ಲಿ ಪ್ರತಿಭಟನೆ ನಡೆದಾಗ ಅಂದು ಯಾವುದೇ ಬಿಜೆಪಿ ನಾಯಕರು ಕೂಡ ಇದಕ್ಕೆ ಬೆಂಬಲವನ್ನೇ ನೀಡಲಿಲ್ಲಎಂದರು

   

Related Articles

error: Content is protected !!