ಕೋಟೇಶ್ವರ : ಮಹಾತ್ಮ ಗಾಂಧಿ ಜನ್ಮ ಜಯಂತಿಯ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ರಾಷ್ಟ್ರ ವ್ಯಾಪಿ ಹಮ್ಮಿಕೊಂಡಿರುವ ಅಭಿಯಾನದ ಪ್ರಯುಕ್ತ ಜಿಲ್ಲಾ ಪಂಚಾಯತ್ ಉಡುಪಿ, ಸ್ವಚ್ಛ ಭಾರತ್ ಮಿಷನ್ಸ್ಥ ಳೀಯ ನಾಲ್ಕು ಗ್ರಾಮ ಪಂಚಾಯತಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ “*ಸ್ವಚ್ಛತಾ ಹೀ ಸೇವಾ ಅಭಿಯಾನ”ಕ್ಕೆ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಚಾಲನೆ ನೀಡಿದರು.
ಸ್ವಚ್ಛತಾ ಹೀ ಸೇವಾ ಅಭಿಯಾನ ಮೂಲಕ ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞಾವಿಧಿ ಬೋಧಿಸಿ ತದನಂತರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದಶಾಸಕರಾದ ಶ್ರೀ ಎ.ಕಿರಣ್ ಕೊಡ್ಗಿಯವರು ಇಂದು ಪ್ರತಿಜ್ಞೆ ಸ್ವೀಕರಿಸಿ ಸಂಕಲ್ಪ ತೊಟ್ಟು ಇಲ್ಲೇ ಮರೆತು ಹೋಗುವುದಲ್ಲ, ಸ್ವಚ್ಛತೆ ನಮ್ಮ ದೈನಂದಿನ ಜೀವನದಲ್ಲಿ ಆದ್ಯತೆಯಾಗಬೇಕು, ಪ್ರತಿ ಕ್ಷಣ ಅದರ ಕುರಿತು ಜಾಗೃತರಾಗಬೇಕು, ಭಾರತ ಜಾಗತಿಕ ಮಟ್ಟದಲ್ಲಿ ಮುಂದುವರಿಯುತ್ತಿದೆ ಆ ನಿಟ್ಟಿನಲ್ಲಿ ನಮ್ಮ ಊರು ನಮ್ಮ ಗ್ರಾಮ ಸದಾ ಶುಚಿಯಾಗಿ ಇರುವುದರೊಂದಿಗೆ ಇಡೀ ದೇಶ ಕಸ ಮುಕ್ತವಾಗಬೇಕು. ಅದಕ್ಕಾಗಿ ನಮ್ಮ ಮನೆ ನಮ್ಮ ಕೇರಿ ನಮ್ಮ ಗ್ರಾಮದ ಶುಚಿತ್ವದ ಕುರಿತು ಸದಾ ಚಿಂತಿಸೋಣ ಎಂದು ಅಭಿಪ್ರಾಯ ವ್ಯಕ್ತಡಿಸಿದರು. ಕಾರ್ಯಕ್ರಮದಲ್ಲಿ ಕೋಟೇಶ್ವರ, ಹಂಗಳೂರು, ಬೀಜಾಡಿ, ಗೋಪಾಡಿ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.