ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ ಇಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಗೆ ಸಂಲಗ್ನಗೊಂಡ ಶಾಲೆಗಳಿಗೆ ವಿಜ್ಞಾನ ಮೇಳ, ಗಣಿತ, ಯೋಗ, ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆಯು ಶಿಶುವರ್ಗ, ಬಾಲವರ್ಗದ ವಿದ್ಯಾರ್ಥಿಗಳಿಗೆ ನಡೆಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು
6ನೇ ತರಗತಿ ಕುಮಾರಿ ಸಾನಿಧ್ಯ ಇವರು ತಯಾರಿಸಿದ ಮೊಬೈಲ್ ಚಾರ್ಜರ್ ವಿಜ್ಞಾನ ಮಾದರಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೋಭಾ ಶೆಟ್ಟಿಯವರು ನೆರವೇರಿಸಿದರು. ಸ್ವಾಗತವನ್ನು ಮುಖ್ಯೋಪಾಧ್ಯಾಯನಿ ಶ್ರೀಮತಿ ಸಂಧ್ಯಾ ಭಟ್, ಪ್ರಾಸ್ತಾವಿಕವಾಗಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿಯವರಾದ ಶ್ರೀ ಮಹೇಶ್ ಹೈಕಾಡಿ ಅವರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾದ ಶ್ರೀಮತಿ ಶೋಭಾ ಶೆಟ್ಟಿಯವರು ತಮ್ಮ ಅನಿಸಿಕೆಯಲ್ಲಿ ಇಂದಿನ ಸ್ಪರ್ಧೆಯು ವಿಶಿಷ್ಟವಾದದ್ದು , ಅಲ್ಲದೇ ಸಂಸ್ಕೃತಿ, ನಡೆ-ನುಡಿಯ ಜ್ಞಾನದೊಂದಿಗೆ ಪಠ್ಯೇತರ ಪೂರಕವಾಗಿ ನಡೆಯುತ್ತಿದೆ ಎಂದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪೈ ಹಾಗೂ ಶಾಲಾ ಅಧ್ಯಕ್ಷರಾದ ಶ್ರೀಯುತ ಸುರೇಶ್ ಬೆಟ್ಟಿನ್ ಇವರು ಉಪಸ್ಥಿತರಿದ್ದರು. ಗಣಿತ ಪ್ರಮುಖರಾದ ಶ್ರೀಮತಿ ಜ್ಯೋತಿ ಅಡಿಗ ಇವರು ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.