ಕೋಟ : ಮಕ್ಕಳಲ್ಲಿ ಬಾಲ್ಯಾವಸ್ಥೆಯಲ್ಲೆ ಧಾರ್ಮಿಕ ಚಿಂತನೆ ಪಸರಿಸಿದರೆ ಅವರ ತಳಹದಿ ಗಟ್ಟಿಗೊಳ್ಳುತ್ತದೆ ಅಲ್ಲದೆ ಸಂಸ್ಕಾರಯುತವಾಗಿ ಬೆಳೆಯಲು ಸಾದ್ಯವಾಗುತ್ತದೆ ಎಂದು ಸೇವಾ ಸಂಗಮ ಟ್ರಸ್ಟ್, ಕುಂದಾಪುರದ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಾದ ಶಿವರಾಮ ಉಡುಪ ಹೇಳಿದರು.ಕೋಟದ ಸೇವಾ ಸಂಗಮ ಶಿಶುಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಧಾರ್ಮಿಕ ಹಾಗೂ ಸಂಸ್ಕಾರಯುತವಾದ ಜೀವನ ಮೌಲ್ಯಗಳನ್ನು ತಿಳಿಸಬೇಕಾದ ಅಗತ್ಯತೆಯನ್ನು ಒತ್ತಿಹೇಳಿದರ ಅವರು ಇದು ಮುಂದಿನ ಜೀವನಕ್ಕೆ ನೈಜ ಸಂಸ್ಕಾರವನ್ನು ನೀಡಲಿದೆ ಶ್ರೀ ಕೃಷ್ಣಾ ಸ್ಪರ್ಧೆಗಳ ಮೂಲಕ ಮಕ್ಕಲ್ಲಿ ಧಾರ್ಮಿಕ ಜಾಗೃತಿ ಹೆಚ್ಚಿಸಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಾಂಸ್ಕøತಿಕ ಚಿಂತಕಿ ಸದಾರಮೆ ಕಾರಂತ್ ಭಾಗವಹಿಸಿದರು.ಮುಖ್ಯ ಅಭ್ಯಾಗತರಾಗಿ ಕೋಟ ವಲಯದ ಕುಟುಂಬ ಪ್ರಬೋಧನ್ ಪ್ರಮುಖ್ ಸಂತೋಷ್ ಪ್ರಭು, ವ್ಯವಸ್ಥಾಪಕಿ ಭಾಗ್ಯವಾದಿರಾಜ್ , ಉಪಾಧ್ಯಕ್ಷೆ ಗೀತಾ ಆನಂದ್ ಸಿ. ಕುಂದರ್ ಉಪಸ್ಥಿತರಿದ್ದರು. ಭಾಗ್ಯೆಶ್ವರಿ ಮಯ್ಯ ನಿರೂಪಿಸಿದರು. ಕೋಟ ಸೇವಾಸಂಗಮದ ಅಧ್ಯಕ್ಷೆ ನಾಗಲಕ್ಷ್ಮೀ ಹೆಗಡೆಯವರು ಸ್ವಾಗತಿಸಿ ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ಇವರು ಧನ್ಯವಾದ ಸಲ್ಲಿಸಿದರು, ಕೋಟ ಸಾಲಿಗ್ರಾಮ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶಿಶುಮಂದಿರ, ಬಾಲಗೋಕುಲ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದ ಮಾತೆಯರಿಗೆ ಬಹುಮಾನ ನೀಡಿದರು. ಶಿಶುಮಂದಿರ, ಬಾಲಗೋಕುಲ ಮತ್ತು ಮಾತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಐಕ್ಯಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.