ಕಿರಿಮಂಜೇಶ್ವರ : ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನವನ್ನು ಆಚರಿಸಲಾಯಿತು.ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಪೂರ್ಣಿಮಾ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸಾವಿತ್ರಿ ಬಾಯಿ ಪುಲೆಯವರು ಕೈಗೊಂಡ ಸಾಮಾಜಿಕ ಪುನರ್ ನವಿಕರಣ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಫಲಿತಾಂಶವಾಗಿ 18 ಮಹಿಳಾ ಶಾಲೆಗಳು ನಿರ್ಮಾಣವಾಗಿರುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ಕುಮಾರಿ ದೀಪಿಕಾ ಆಚಾರ್ಯ ಅವರು ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕಿಯದ ಸಾವಿತ್ರಿಬಾ ಪುಲೆ ಅವರ ಶಿಕ್ಷಣ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಚಳುವಳಿ,ಸ್ತ್ರೀ ವಿಮೋಚನೆಯ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿದರು.
ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯಾದ ರಮ್ಯಾ ಸ್ವಾಗತಿಸಿ, ಶ್ರೀಮತಿ ಆಶಾಲತಾ ಶೆಟ್ಟಿ ವಂದಿಸಿ, ದೀಪಿಕಾ ದೇವಾಡಿಗ ನಿರೂಪಿಸಿದರು.