Home ಕರಾವಳಿ ಸುದ್ದಿಶ್ರೀ ಸನ್ನಿಧಿ ಟ್ರಾವೆಲ್ಸ್‌ : ಕೋಟೇಶ್ವರದಲ್ಲಿ ನೂತನ ಕಚೇರಿ ಶುಭಾರಂಭ

ಶ್ರೀ ಸನ್ನಿಧಿ ಟ್ರಾವೆಲ್ಸ್‌ : ಕೋಟೇಶ್ವರದಲ್ಲಿ ನೂತನ ಕಚೇರಿ ಶುಭಾರಂಭ

by Kundapur Xpress

ಕುಂದಾಪುರ: ರಾಜ್ಯದ ಪ್ರತಿಷ್ಠಿತ ಶ್ರೀಸನ್ನಿಧಿ ಟ್ರಾವೆಲ್ಸ್‌ನ ಬುಕ್ಕಿಂಗ್ ಸೇವೆ, ಪಾರ್ಸಲ್ ಸರ್ವೀಸ್ ಹಾಗೂ ಬಸ್ಸಿಗೆ ಸಂಬಂಧಪಟ್ಟ ನಾನಾ ಮಾಹಿತಿಗಳ ನಗರ ಕಚೇರಿ ಬುಧವಾರ ಕೋಟೇಶ್ವರ ಕಾಮತ್ ಪೆಟ್ರೋಲ್ ಬಂಕ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿ ಆರಂಭಗೊಂಡಿದೆ

ಸಂಸ್ಥೆಗೆ ಸಂಬಂಧಿಸಿದ ನಗರ ಕೇಂದ್ರಿತ ಕಚೇರಿ ಇದಾಗಿದ್ದು ಗ್ರಾಹಕರಿಗೆ ಬಸ್‌ಗೆ ಸಂಬಂಧಿಸಿದ ಎಲ್ಲ ಬಗೆಯ ಸೇವೆ ಲಭ್ಯವಿದೆ. ಶೌಚಾಲಯವನ್ನೊಳಗೊಂಡ ಅತ್ಯಾ ಧುನಿಕ ಸೇವೆ ಈಗಾಗಲೆ ಆರಂಭಿಸಿರುವ ಸಂಸ್ಥೆ ಗ್ರಾಹಕರಿಗೆ ಮತ್ತಷ್ಟು ಸೇವೆ ಒದಗಿಸುವ ನೆಲೆಯಲ್ಲಿ ಕಚೇರಿ ಆರಂಭಿಸಿದೆ.

ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಚೇರಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಸತೀಶ್ ಶೆಟ್ಟಿ ಹಾಗೂ ಸನ್ನಿಧಿ ಎಸ್.ಶೆಟ್ಟಿ ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Related Articles