Home ಕರಾವಳಿ ಸುದ್ದಿರಮಾನಾಥ ರೈ ಅಪಘಾತದ ಪೋಸ್ಟ್‌ : ಅವಹೇಳನಕಾರಿ ಕಮೆಂಟ್‌,ಕೇಸು ದಾಖಲು

ರಮಾನಾಥ ರೈ ಅಪಘಾತದ ಪೋಸ್ಟ್‌ : ಅವಹೇಳನಕಾರಿ ಕಮೆಂಟ್‌,ಕೇಸು ದಾಖಲು

Ramanath Rai accident post: Case registered over derogatory comment.

by Kundapur Xpress

ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಅವರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಬೆದರಿಕೆ ಹಾಕಿದ ಆರೋಪದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್‌ (62) ನೀಡಿದ ದೂರಿನನ್ವಯ ಆರೋಪಿ ಪ್ರಭಾಕರ ಹೆಗ್ಡೆ ವಿರುದ್ಧ ಪ್ರಕರಣ

ದಾಖಲಾಗಿದೆ. ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ಕಾರ್ಯ ಮುಂದುವರೆಸಿದ್ದಾರೆ.

Related Articles

Leave a Comment

This site uses Akismet to reduce spam. Learn how your comment data is processed.