Home ಕರಾವಳಿ ಸುದ್ದಿಬೈಕ್ ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಸಹಸವಾರನ ಮೇಲೆ ಹಲ್ಲೆ

ಬೈಕ್ ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಸಹಸವಾರನ ಮೇಲೆ ಹಲ್ಲೆ

"Assault on pillion rider for asking to ride the bike slowly"

by Kundapur Xpress

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಬ್ಬಿಬೇರು ಎಂಬಲ್ಲಿ ಬೈಕ್ ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಸಹಸವಾರನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಉಳ್ಳೂರು-74 ಗ್ರಾಮದ ಸತೀಶ ನಾಯ್ಕ (48) ಅವರು ಸೆಪ್ಟೆಂಬರ್ 23ರಂದು ಸಿದ್ದಾಪುರದ ಬಾರ್‌ನಲ್ಲಿ ಚಂದ್ರ ಪೂಜಾರಿ ಅವರೊಂದಿಗೆ ಮದ್ಯಪಾನ ಮಾಡಿದ್ದರು. ಬಳಿಕ ಚಂದ್ರ ಪೂಜಾರಿ ಅವರು ಬೈಕ್‌ನಲ್ಲಿ ಸತೀಶ ನಾಯ್ಕ ಅವರನ್ನು ಸಹಸವಾರರಾಗಿ ಕೂರಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು.

ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಅಬ್ಬಿಬೇರು ಬಳಿ ಬೈಕ್ ವೇಗವಾಗಿ ಚಲಾಯಿಸುತ್ತಿದ್ದ ವೇಳೆ, ಸತೀಶ ನಾಯ್ಕ ಅವರು ನಿಧಾನವಾಗಿ ಚಲಾಯಿಸುವಂತೆ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಚಂದ್ರ ಪೂಜಾರಿ, ಬೈಕ್‌ನಿಂದ ಸತೀಶ ನಾಯ್ಕ ಅವರನ್ನು ಕೆಳಗೆ ಬೀಳಿಸಿದ ಆರೋಪವಿದೆ.

ಇದರಿಂದ ಸತೀಶ ನಾಯ್ಕ ಅವರ ಗಲ್ಲ, ಮುಖ ಹಾಗೂ ಎಡಕೈಗೆ ರಕ್ತ ಗಾಯವಾಗಿದ್ದು, ಬಳಿಕ ಅವಾಚ್ಯವಾಗಿ ಬೈದು ರಸ್ತೆಯ ಪಕ್ಕದ ಮೋರಿಗೆ ದೂಡಿ, ಅಲ್ಲಿದ್ದ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ನಡೆಸಿ ತೆರಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ

Related Articles

Leave a Comment

This site uses Akismet to reduce spam. Learn how your comment data is processed.