ಉಡುಪಿ: ದೇಶದಲ್ಲಿ ಕೇಸರಿ ಆಡಳಿತವನ್ನೇ ಮಾಡಲು ಹೋಗುತ್ತಿರುವ ಪಕ್ಷ ಬಿಜೆಪಿ, ಇದನ್ನು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ ಕೇಸರಿ ಅಂದರೆ ಅದು ಭಾರತೀಯ ಸಂಸೃತಿಯ ಪ್ರತೀಕವಾಗಿದೆ. ರಾಷ್ಟ್ರೀಯತೆಯ ಪ್ರತೀಕವು ಆಗಿದ್ದು ಕೇಸರಿಯ ಆಡಳಿತವನ್ನೇ ದೇಶದಲ್ಲಿ ತರಬೇಕೆಂದು ನಾವು ಹೊರಟಿದ್ದೇವೆ. ನಾವು ದ್ವೇಷವನ್ನು ಮಾಡಲು ಹೊರಟವರಲ್ಲ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು. ಉಡುಪಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇರವಾಗಿ ಒಂದು ಕೋಮಿಗೆ ಬೆಂಬಲವನ್ನು ನೀಡುತ್ತಿದೆ. ಇನ್ನೊಂದು ಕೋಮುವಿನ ಜನ ನೆಮ್ಮದಿವಾಗಿ ಬದುಕಬಾರದು ಅನ್ನೋದು ಕಾಂಗ್ರೆಸಿನ ಸಿದ್ಧಾಂತವಾಗಿದೆ. ರಾಜ್ಯದಲ್ಲಿ ಈ ರೀತಿಯಾಗಿ ಕಾಂಗ್ರೆಸ್ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಇದಕ್ಕೆ ನಮ್ಮ ವಿರೋಧ ಇದೆ ಎಂದರು.
ಕಾಂಗ್ರೆಸ್ ಚೊಂಬು ಬಗ್ಗೆ..
ದೇಶದ ಅದೆಷ್ಟೋ ಹಳ್ಳಿಗಳಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡದೆ ಹಳ್ಳಿಯ ಮಹಿಳೆಯರಿಗೆ ಚೊಂಬು ಕೊಟ್ಟದ್ದು ಇದೇ ಕಾಂಗ್ರೆಸ್. ಆದರೆ ಸ್ವಾತಂತ್ರ್ಯ, ನಂತರ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸರಕಾರ ಶೌಚಾಲಯವನ್ನು ನಿರ್ಮಾಣ ಮಾಡಿದೆ. ಚೊಂಬು ರಹಿತ ಆಡಳಿತ ದೇಶದಲ್ಲಿ ಕೊಟ್ಟಿದ್ದು ಮೋದಿ ಹಾಗೂ ಬಿಜೆಪಿ ಕಾಲದಲ್ಲಿ ಇದನ್ನು ಒಪ್ಪುವಂತಹ ಜಾಹೀರಾತನ್ನು ಕಾಂಗ್ರೆಸ್ ಕೊಟ್ಟಿದೆ ಎಂದರು.