ಕೋಟ : ಕೋಟ ವಿದ್ಯಾ ಸಂಘ ಹಾಗೂ ವಿವೇಕ ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರದಿನಾಚರಣೆ ಅಂಗವಾಗಿ ಗುರುವಂದನೆ ಅಭಿವಂದನೆ ಎನ್ನುವ ಶೀರ್ಷಿಕೆ ಅಡಿಯಲ್ಲಿ ಪರಿಸರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅಧ್ಯಾಪಕರನ್ನು ಸಂಮ್ಮಾನಿಸುವ ವಿಶಿಷ್ಟವಾದ ಕಾರ್ಯಕ್ರಮ ಇತ್ತೀಚಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾಲೇಜಿನ ಸಭಾಂಗಣದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು ಕಟೀಲ್ ಇದರ ನಿವೃತ್ತ ಪ್ರಾಂಶುಪಾಲ ಪೆÇ್ರ .ಬಾಲಕೃಷ್ಣ ಶೆಟ್ಟಿ, ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ, ಶಿಕ್ಷಕರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವುದರ ಮೂಲಕ ನವರಾಷ್ಟ್ರ ಕಟ್ಟುವ ಕಾರ್ಯ ನಡೆಯುತ್ತದೆ. ಆದ್ದರಿಂದ ಶಿಕ್ಷಕರು ಮೊದಲು ತನ್ನ ವೃತ್ತಿಯನ್ನು ಗೌರವಿಸಬೇಕು.
ಹಾಗೆ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಪ್ರೀತಿಸಿ ಪಾಠ ಪ್ರವಚನ ಮಾಡಬೇಕು. ಹೇಗೆ ಶಿಲ್ಪಿಯು ಕಲ್ಲನ್ನು ಕೆತ್ತಿ ಬೇಡದೆ ಇರುವ ಅಂಶವನ್ನು ತೆಗೆದು ಸುಂದರ ಮೂತಿಯನ್ನಾಗಿ ಮಾಡುತ್ತಾನೆ ಹಾಗೆ ವಿದ್ಯಾರ್ಥಿಗಳನ್ನು ತಿದ್ದಿ ಬೆಳಸಬೇಕೆಂದು ತಿಳಿಸಿ ದಿಕ್ಕೂಚಿ ಭಾಷಣ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ ಪ್ರಭಾಕರ ಮೈಯ ವಹಿಸಿ ಮಾತನಾಡಿ, ಕೋಟವಿದ್ಯಾಸಂಘ ಒಂದು ವಿಶಿಷ್ಟವಾದ ಸಂಪ್ರದಾಯವನ್ನು ಹಾಕಿಕೊಂಡಿದ್ದು ಅಧ್ಯಾಪಕರ ನಡುವೆ ಉತ್ತಮ ವಾದ ಸಂಬಂಧ ಮತ್ತು ಅನ್ನೋನ್ಯತೆಯನ್ನು ಬೆಳಸುವಲ್ಲಿ ಸಹಕಾರಿ ಎಂದು ತಿಳಿಸಿದರು.ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ ರಾಮದೇವ ಐತಾಳ್ ಶುಭಹಾರೈಸಿದರು. ಖಜಾಂಚೆ ವೆಲೇರಿಯನ್ ಮೇನೇಜಸ್ ಉಪಸ್ಥಿತರಿದ್ದರು.
ಇದೇ ವೇಳೆ ಇತ್ತೀಚಿಗೆ ನಿವೃತ್ತರಾದ ಮೂಡುಗಿಳಿಯಾರು ಸರ್ಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ್ ಭಟ್, ಮಣೂರು ಪಡುಕರೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಸೇಸು, ಸ .ಹಿ.ಪ್ರಾ ಶಾಲೆ ಮೂಡುಗಿಳಿಯಾರು ಮುಖ್ಯ ಶಿಕ್ಷಕ ರಮೇಶ್, ಕಾರ್ಕಡ ಶಾಲಾ ಶಿಕ್ಷಕ ನಾರಾಯಣ ಆಚಾರ್ ಕಾರ್ಕಡ,ಕೋಟ ಶಾಂಭವೀ ಶಾಲಾ ಶಿಕ್ಷಕ ರಾಜಾರಾಮ್ ಕಾರಂತ್, ಸ, ಹಿ. ಪ್ರಾ ಶಾಲೆ ವಡ್ಡರ್ಸೆ ಶಿಕ್ಷಕಿ ಹೇಮಲತಾ ಇವರನ್ನು ಪುರಸ್ಕರಿಸಲಾಯಿತು.ಪ್ರಾಂಶುಪಾಲರಾದ ಜಗದೀಶ ನಾವಡ ಸ್ವಾಗತಿಸಿದರು. ಸಹನಾ ಪ್ರಾರ್ಥಿಸಿದರು. ಅಧ್ಯಾಪಕ ಪ್ರೇಮಾನಂದ ನಿರೂಪಿಸಿ ಜಗದೀಶ ಹೊಳ್ಳ ವಂದಿಸಿದರು.