ಕುಂದಾಪುರ : ಕುಂದಾಪುರದ ಖಾರ್ವಿಕೇರಿ ನಿವಾಸಿಯಾದ ರಾಘವೇಂದ್ರ ಶೇರಿಗಾರ್ ಯಾನೆ ಬನ್ಸ್ ರಾಘು ರವರು ಆದಿತ್ಯವಾರ ನಗರದ ಚಿಕ್ಕನ್ ಸಾಲ್ ರಸ್ತೆಯಲ್ಲಿ ರಾತ್ರಿ 7.00 ಗಂಟೆಯ ಸುಮಾರಿಗೆ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿ ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದು 3,000 ಕ್ಕೂ ಮಿಕ್ಕಿ ಜನ ಅಂತಿಮ ದರ್ಶನ ಪಡೆದರು ನಿಧನದ ಸುದ್ದಿ ತಿಳಿಯುತ್ತಲೇ ನೂರಾರು ಮಂದಿ ಮನೆಯ ಬಳಿಯಲ್ಲಿ ಜಮಾವಣೆಗೊಂಡರು
ಯಾವುದೇ ಅಹಿತಕರ ಘಟನೆಗಳಾಗದಂತೆ ಬಿಗಿ ಪೊಲೀಸ್ ಬಂದೋಬಸ್ತನ್ನು ಎರ್ಪಡಿಸಲಾಗಿದ್ದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಅರುಣ್ ರವರು ಕುಂದಾಪುರದಲ್ಲೇ ವಾಸ್ತವ್ಯ ಹೂಡಿದ್ದು ಆರೊಪಿಗಳ ಬಗ್ಗೆ ಮಾಹಿತಿ ಲಬ್ಯವಾಗಿದ್ದು ಅತೀ ಶೀಘ್ರದಲ್ಲೆ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ