102
ಕುಂದಾಪುರ : ಫ್ರೆಂಡ್ಸ್ ಸರ್ಕಲ್ (ರಿ.) ಮೀನು ಮಾರ್ಕೆಟ್ ರಸ್ತೆ , ಕುಂದಾಪುರ ಇವರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕ ದಂಪತಿಗಳಾದ ಶ್ರೀ ಎಂ.ಸಣ್ಣಯ್ಯ ಹೆಬ್ಬಾರ್ ಹಾಗೂ ಶ್ರೀಮತಿ ಲೀಲಾವತಿ ಹೆಬ್ಬಾರ್ ಇವರುಗಳನ್ನು ಸ್ವಗೃಹದಲ್ಲಿ ಸನ್ಮಾನಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ಸಂಘದ ಗೌರವಾಧ್ಯಕ್ಷರಾದ ಶೀನಾ ಖಾರ್ವಿ ಹಾಗೂ ಅಧ್ಯಕ್ಷರಾದ ಗಣೇಶ್ ನಾಯ್ಕ್ ಸಂಘದ ಸಂಚಾಲಕರಾದ ಸುಕುಮಾರ ನಾಯ್ಕ್ , ಪ್ರಧಾನ ಕಾರ್ಯದರ್ಶಿ ಚೇತನ್ ದೇವಾಡಿಗ ಕೋಶಾಧಿಕಾರಿ ಶರತ್ ಎಸ್ ಖಾರ್ವಿ ಸಂಘಟನಾ ಕಾರ್ಯದರ್ಶಿ ಮನೋಹರ ಪುತ್ರನ್ ಮಾಜಿ ಅಧ್ಯಕ್ಷ ನಾಗರಾಜ್ ಖಾರ್ವಿ ಸದಸ್ಯರಾದ ಗಣೇಶ ಸಾಲಿಯಾನ್ ,ಅಮೋಘ ನಾಯ್ಕ್, ಸನತ್, ಕಾರ್ತಿಕ್, ಸಚಿನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

