ಕೋಟ : ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆ ವತಿಯಿಂದ ಪಾರಂಪಳ್ಳಿ ಪಡುಕರೆಯ ಅಂಗನವಾಡಿಯ ಚಿಣ್ಣರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಟೀಮ್ ಭವಾಬ್ಧಿಯ ಅಧ್ಯಕ್ಷ ಸಂತೋಷ ತಿಂಗಳಾಯ ಅಂಗನವಾಡಿ ಶಿಕ್ಷಕಿ ನಾಗರತ್ನ ಸಮವಸ್ತ್ರ ವನ್ನು ಹಸ್ತಾಂತರಿಸಿದರು. ಟೀಮ್ ಭವಾಬ್ಧಿಯ ಸಂಚಾಲಕ ರವೀಂದ್ರ ತಿಂಗಳಾಯ, ಉಪಾಧ್ಯಕ್ಷ ಉದಯ್ ಬಂಗೇರ, ಕಾರ್ಯದರ್ಶಿ ಭರತ್ , ಕೊಷಾಧಿಕಾರಿ ಶಿವಾನಂದ ಕುಂದರ್ , ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಉಪಾಧ್ಯಾಯ, ,ಅಂಗನವಾಡಿ ಸಹಾಯಕಿ ಸುಶೀಲ, ಭವಾಬ್ಧಿಯ ಗೌರವ ಸಲಹೆಗಾರರಾದ ಗಣೇಶ್ ತಿಂಗಳಾಯ, ಕೌಷಿಕ್ ಜೋಗಿ ಹಾಗು ಸದಸ್ಯರು , ಪೋಷಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ದೇವೇಂದ್ರ ಶ್ರೀಯಾನ್ ಅವರು ನಿರೂಪಿಸಿ ನಿರ್ವಹಣೆ ಮಾಡಿದರು.ಕಾರ್ಯಕ್ರಮದ ಅಂಗವಾಗಿ ಸಿಹಿ ತಿಂಡಿ ವಿತರಣೆ ನಡೆಯಿತು.