Home » ಸರ ಸುಲಿಗೆ-ಕಳ್ಳತನ ಪ್ರಕರಣ ಇಬ್ಬರ ಬಂಧನ
 

ಸರ ಸುಲಿಗೆ-ಕಳ್ಳತನ ಪ್ರಕರಣ ಇಬ್ಬರ ಬಂಧನ

by Kundapur Xpress
Spread the love

ಸರ ಸುಲಿಗೆ-ಕಳ್ಳತನ ಪ್ರಕರಣ ಇಬ್ಬರ ಬಂಧನ

ಮಂಗಳೂರು : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಚಿನ್ನದ ಸರ ಸುಲಿಗೆ ಹಾಗೂ ನಾಲ್ಕು ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದು ಇಬ್ಬರನ್ನು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ  ಆರೋಪಿಗಳಿಂದ ಒಟ್ಟು ಮೌಲ್ಯ 12,48,550 ಮೌಲ್ಯದ 240 ಗ್ರಾಂ ಚಿನ್ನಾಭರಣ ಮತ್ತು 1 ಲಕ್ಷದ 30ಸಾವಿರ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ

ಬಂಟ್ವಾಳದ ಕಲ್ಲಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಹಬೀಬ್‌ ಹಸನ್‌ ಮತ್ತು ಉಳ್ಳಾಲದ ಮಹಮದ್ ಪೈಝಲ್ ಎಂಬವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕುಲ್ದೀಪ್ ಕುಮಾರ್ ಜೈನ್‌ ಪತ್ರಕಾಗೋಷ್ಠಿಯಲ್ಲಿ ತಿಳಿಸಿದರು

ಆರೋಪಿಗಳು ಮಂಗಳೂರಿನಲ್ಲಿ ಕಳ್ಳತನ ಮಾಡಿದ ಚಿನ್ನಾಭರಣವನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರೂ ಯಶಸ್ವಿಯಾಗಿರಲಿಲ್ಲ ಬಳಿಕ ಇವರಿಬ್ಬರು ಸುರತ್ಕಲ್ಲಿಗೆ ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸುರತ್ಕಲ್‌ ನ ಕೂಡಿಪ್ಪಾಡಿಯಲ್ಲಿ ವಾಹನ ತಪಾಸಣೆ ಆರಂಭಿಸಿದ್ದಾರೆ ಅದೇ ದಾರಿಯಲ್ಲಿ ಹೋಗುತ್ತಿದ್ದ ಆರೋಪಿಗಳ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ದೂರದಲ್ಲಿ ವಾಹನ ನಿಲ್ಲಿಸಿಸ್ಥಳದಿಂದ ಓಡಲು ಆರಂಭಿಸಿದರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದಾಗ ಬೈಕ್‌ ಕಳ್ಳತನ ಪ್ರಕರಣದ ಜೊತೆಗೆ  ದಕ್ಷಿಣ ಕನ್ನಡ ಮತ್ತು ಉಡುಪಿ ನಡೆದ ವಿವಿಧ ಚಿನ್ನದ ಸರ ಸುಲಿಗೆ ಪ್ರಕರಣಗಳ ಬಗ್ಗೆ  ಬಾಯ್ಬಿಟ್ಟಿದ್ದಾರೆ

ಇವರಿಬ್ಬರು ಕದ್ದ ದ್ವಿಚಕ್ರ ವಾಹನಗಳನ್ನು ಸರ ಸುಲಿಗೆಗೆ ಬಳಸುತ್ತಿದ್ದರು ಹಾಗೂ ನಿರ್ಜನ ರಸ್ತೆಗಳಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಸುಲಿಗೆ ಮಾಡುತ್ತಿದ್ದರು ಎಂದು ಪೋಲಿಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ರವರು ತಿಳಿಸಿದ್ದು ಕಾರ್ಯಾಚರಣೆಯ ತಂಡಕ್ಕೆ ನಗದು ಬಹುಮಾನವನ್ನು ಘೋಷಿಸಿದ್ದಾರೆ

   

Related Articles

error: Content is protected !!