ಕಟಪಾಡಿ : ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ನಾಯಕತ್ವ ಗುಣ ಸುಪ್ತವಾಗಿ ಅಡಕವಾಗಿರುತ್ತದೆ.ಅವುಗಳಿಗೆ ಕಾಲಕಾಲಕ್ಕೆ ಸರಿಯಾದ ಸಂದರ್ಭದಲ್ಲಿ ತರಬೇತಿ,ಅವಕಾಶಗಳು ಸಿಕ್ಕಿದಾಗ ಆತ ತನ್ನ ನಾಯಕತ್ವವನ್ನ ಜಗತ್ತಿಗೆ ಪರಿಚಯ ಮಾಡಿಕೊಡುತ್ತಾನೆ. ನಾಯಕತ್ವ ಅನ್ನೋದು ಕಲಿಕೆಯಿಂದ ಬರುವಂತದ್ದಲ್ಲ ಅದು ಸುತ್ತಮುತ್ತ ಕಂಡ ವಿಚಾರಗಳನ್ನ ಜೊತೆಗೆ ತನ್ನಲ್ಲಿರುವ ಕ್ರಿಯಾಶೀಲತೆಗಳನ್ನ ಆ ಸಮಯ ಸಂದರ್ಭದಲ್ಲಿ ಬಳಸಿಕೊಂಡು ವ್ಯಕ್ತಿ ನಾಯಕನಾಗುತ್ತಾನೆ.
ಎಂದು ತ್ರಿಶಾ ಸಮೂಹ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿರುವ ಜೈದೀಪ್ ಅಮೀನ್ ಹೇಳಿದರು. ಅವರು ಇತ್ತೀಚಿಗೆ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಯೋಜಿಸಿದ್ದ ನಾಯಕತ್ವ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.