ಕೋಟ : ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಇಲ್ಲಿ ಕಾರ್ಯನಿರ್ವಹಿಸಿ ಕೋಟದ ಮಣೂರು ಪಡುಕರೆ ಸಂಯುಕ್ತ ಪ್ರೌಢ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕ ಹೆರಿಯ ಮಾಸ್ಟರ್ ಇವರಿಗೆ ವಿದ್ಯಾರ್ಥಿಗಳಿಂದ ವಿದಾಯ ಕಾರ್ಯಕ್ರಮ ಇತ್ತೀಚಿಗೆ ವಡ್ಡರ್ಸೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಉತ್ತಮ ಆರೋಗ್ಯಕ್ಕಾಗಿ ಒಂದು ತುತ್ತು ಅನ್ನ ಬೇಕು ಎನ್ನುವಾಗಲೇ ಎದ್ದು ಬಿಡಬೇಕಂತೆ ಹಾಗೆಯೇ ಹೆರಿಯ ಮಾಷ್ಟ್ರು ಇನ್ನೂ ಇರಬೇಕಿತ್ತು ಎನ್ನುವಾಗಲೇ ನೀವು ವರ್ಗಾವಣೆಯಾಗಿ ಹೋಗಬೆಂಕೆಂದು ಕೊಂಡಿರುವುದು ಬೇಸರ ತಂದಿದೆ ಎಂದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೆಟ್ಟಿ ನುಡಿದರು.
ಶಿಕ್ಷಕರ ಹುದ್ದೆ ಪವಿತ್ರ ಸ್ಥಾನದದಾಗಿದೆ, ಹಾಗಾಗಿ ವಿದ್ಯಾರ್ಥಿಗಳು ಬದುಕಿನ ಖಾಲಿ ಹಾಳೆಯಲ್ಲಿ ಭವಿಷ್ಯದ ಮುದ್ದಾದ ಅಕ್ಷರಗಳನ್ನು ಬರೆದು ತನ್ನದೇ ಆದ ಛಾಪನ್ನು ಮೂಡಿಸಿ ಅಪಾರ ಶಿಷ್ಯವೃಂದ ಸಂಪಾಧಿಸಿದವರು ಎಂದು ಶಿಕ್ಷಕ ಮಂಜುನಾಥ ಶೆಟ್ಟಿ ತಿಳಿಸಿದರು. ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ ಶೆಟ್ಟಿ ಯಾಳಹಕ್ಲು ಮಾತನಾಡಿ ಅಪಾರ ಶಿಷ್ಯರ ಬಳಗವನ್ನು ಹೊಂದಿರುವುದು ಸಮಾರಂಭವೇ ಸಾಕ್ಷಿ ಎಂಬ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು,
ನಿವೃತ್ತ ಶಿಕ್ಷಕರಾದ ಬಾಲಕೃಷ್ಣಶೆಟ್ಟಿ, ಆನಂದ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಗಾಯತ್ರಿದೇವಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಉಷಾ ವಹಿಸಿದ್ದರು. ಸಮಾರಂಭದಲ್ಲಿ ಹಳೆವಿದ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಶಿಕ್ಷಕಿ ಗೀತಾಶೆಟ್ಟಿ ಸ್ವಾಗತಿಸಿ , ಶಿಕ್ಷಕ ಶರತ್ ವಹಿಸಿದರು, ಶಿಕ್ಷಕಿ ಗೀತಾ ನಾಯಕ್ ಅಭಿನಂದನಾ ಪತ್ರ ವಾಚಿಸಿದರು. ಶಿಕ್ಷಕಿ ಭಾರತಿ ನಿರೂಪಿಸಿ, ಸುಧಾಕರ ಸಂಘಟಿಸಿ, ವಿದ್ಯಾರ್ಥಿಗಳಾದ ಸುಪ್ರಿತ್, ಭರತ್, ಸಾನ್ವಿಕಾ, ಯೋಗಿನಿ ಅಭಿವಂದನಾ ಮಾತನಾಡಿದರು.