ಕುಂದಾಪುರ : ಕುಂದಾಪುರದ ಮರವಂತೆಯ ಅರಬ್ಬಿ ಸಮುದ್ರ ಮತ್ತು ಸೌಪರ್ಣಿಕಾ ನದಿ ತೀರ ಮಧ್ಯೆ ಉದ್ಭವಿಸಿರುವ ಮಳೆ ದೇವರೆಂದೇ ಪ್ರಸಿದ್ದಿ ಪಡೆದಿರುವ ಶ್ರೀವರಾಹ, ಶ್ರೀವಿಷ್ಣು ಶ್ರೀನಾರಸಿಂಹ ದೇವರ ಸಾನಿಧ್ಯ ಹೊಂದಿರುವ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವರ ಜಾತ್ರಾ ಮಹೋತ್ಸವವು ಇಂದು ನಡೆಯಲಿದ್ದು ಶ್ರೀ ದೇವರ ದರ್ಶನಕ್ಕೆ ಸುತ್ತಲಿನ ಗ್ರಾಮಗಳಿಂದ ಮಾತ್ರವಲ್ಲದೆ ಬೈಂದೂರು, ಕುಂದಾಪುರ, ಭಟ್ಕಳ ಭಾಗದಿಂದಲೂ ಭಕ್ತರು ಆಗಮಿಸುತ್ತಾರೆ
ಮರವಂತೆ ಮಹಾ ರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಇಂದು ನಡೆಯಲಿರುವ ಕರ್ಕಾಟಕ ಅಮಾವಾಸ್ಯೆ ಜಾತ್ರೆಗೆ ತಯಾರಿ ಮಾಡಿ ಕೊಳ್ಳಲಾಗಿದ್ದು ಜಾತ್ರೆಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಭಕ್ತಾದಿಗಳಿಗೆ ದೇವರ ದರ್ಶನ ಸುಗಮವಾಗಿಸಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಪೊಲೀಸ್ ಇಲಾಖೆಯು ಸಕಲ ವ್ಯವಸ್ಥೆ ಕೈಗೊಂಡಿದೆ