271
ಕುಂದಾಪುರ : ಕೇಂದ್ರ ಗ್ರಂಥಾಲಯದ ವರಿಷ್ಠಾಧಿಕಾರಿಗಳಾದ ಡಾ.ವೈ.ಅವನೀಂದ್ರನಾಥ್ ರಾವ್ ಅವರು ವಿಯೆಟ್ನಾಮ್ ದೇಶದ ಮರು ಏಕೀಕರಣದ ಸ್ವರ್ಣಮಹೋತ್ಸವ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಉಡುಪಿ ಜಿಲ್ಲೆಯ ನಿವಾಸಿಯದ ಅವರು ಕುಂದಾಪುರ ನಗರದ ಬೋರ್ಡ್ ಹೈಸ್ಕೂಲ್ ಇದರ ಹಳೇ ವಿದ್ಯಾರ್ಥಿಯಾಗಿದ್ದು 1986 – 87ನೇ ಇಸವಿಯಲ್ಲಿ ಅವರು ಎಸ್ ಎಸ್ ಎಲ್ ಸಿ ಯನ್ನು ಪುರೈಸಿದ್ದರು
ಭಾರತದಲ್ಲಿನ ವಿಯೆಟ್ನಾಮ್ ರಾಯಭಾರಿ ನೂಯೆನ್ ಥಾನ್ ಹೈ ಅವರು ಡಾ.ವೈ.ಅವನೀಂದ್ರನಾಥ್ ರಾವ್ ಅವರಿಗೆ ಆ ದೇಶದ ಅಂಚೆ ಚೀಟಿ ಚಿತ್ರಗಳ ವಿಶೇಷ ಉಡುಗೊರೆ ಮತ್ತು ಕೃತಿಗಳನ್ನು ನೀಡಿ ಗೌರವಿಸಿದರು.
ಭಾರತ ಸರಕಾರ ಸಂಸ್ಕೃತಿ ಮಂತ್ರಾಲಯದ ಭಾಗವಾಗಿರುವ ಕೇಂದ್ರ ಸಚಿವಾಲಯ ಗ್ರಂಥಾಲಯದಲ್ಲಿ ಏಳು ವರ್ಷಗಳ ಹಿಂದೆ ವಿಯೆಟ್ನಾಮ್ ಕಾರ್ನರ್ ಸ್ಥಾಪಿಸಲಾಗಿತ್ತು ಈ ಸಾಂಸ್ಕೃತಿಕ ಸಹಕಾರದ ಹಿನ್ನೆಲೆಯಲ್ಲಿ ಇತ್ತೀಚಿಗೆ ಉಡುಗೊರೆ ಸಮಾರಂಭವನ್ನು ವಿಯೆಟ್ನಾಮ್ ನಲ್ಲಿ ಆಯೋಜಿಸಲಾಗಿತ್ತು.

