135
ಕುಂದಾಪುರ : ಭಾರತೀಯ ಸೇನಾ ಕಾರ್ಯಾಚರಣೆ ಅಪರೇಷನ್ ಸಿಂಧೂರ ವಿಜಯದ ಸಂಕೇತವಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ವಿಶೇಷ ದೀಪಾರಾಧನೆ ಪೂರ್ವಕ ರಂಗಪೂಜೆಯನ್ನು ಊರ ಹಲವು ಗಣ್ಯರು, ರಾಜಕೀಯ ಮುಖಂಡರು,ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಸದಸ್ಯರು ಮತ್ತು ಭಕ್ತಾದಿಗಳೊಂದಿಗೆ ಆಡಳಿತ ಮೊಕ್ತೇಸರರು ಪರ್ಯಾಯ ಅರ್ಚಕರು,ಅರ್ಚಕ ಸಿಬ್ಬಂದಿಯೊಂದಿಗೆ ವಿಶೇಷ ಪ್ರಾರ್ಥನೆಯೊಂದಿಗೆ ಸೇವೆಯನ್ನು ನೆರವೇರಿಸಲಾಯಿತು
ವೀರ ಸೈನಿಕರ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾ ದೇಶದ ರಕ್ಷಣೆ ಮತ್ತು ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು ಈ ಸಂದರ್ಭದಲ್ಲಿ ದೇಗುಲದ ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾಧ್ಯಾಯ ಹಾಗೂ ಕಾಂಗ್ರೇಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ ಮೊಳಹಳ್ಳಿ ದಿನೇಶ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು

