ಸಿದ್ದಾಪುರ : ಶಿಕ್ಷಣದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಎರಡು ಸಮಾನವಾಗಿ ಅಳವಡಿಸಿಕೊಳ್ಳಬೇಕು. ಸಹಪಠ್ಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯ ಹೆಚ್ಚಳವಾಗುತ್ತದೆ. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ತನ್ನ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ನಡುವೆ ನಡೆಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಮೂಡಿ ಬರಲಿ . ಇನ್ನೂ ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಿ. ಇದರಿಂದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದವರೆಗೂ ತಮ್ಮ ಸಾಧನೆಯನ್ನು ಬೆಳೆಸಿಕೊಂಡು ಸಾಧಕರಾಗಿ ಮೂಡಿಬರಲಿ, ಸಂಸ್ಥೆಗೆ ಹೆಸರನ್ನು ತರಲಿ ಎಂದು ಅಮೃತ ಭಾರತಿ ಟ್ರಸ್ಟಿನ ಸದಸ್ಯರು ಶ್ರೀಯುತ ಸುಧೀರ್ ನಾಯಕ್ ನುಡಿದರು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವಸತಿ ನಿಲಯದ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸುವ ಜಿಲ್ಲಾ ಮಟ್ಟದ ಗುಂಪು ಆಟಗಳ ಸ್ಪರ್ಧೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಅಮೃತ ಭಾರತಿ ಟ್ರಸ್ಟಿನ ಕಾರ್ಯದರ್ಶಿ ಗುರುದಾಸ ಶೆಣೈ , ಮತ್ತು ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀಯುತ ಶೈಲೇಶ್ ಕಿಣಿ , ಚದುರಂಗ ಕಾಯಿನ್ ಚಲಿಸುವುದರ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು . ಕಾರ್ಯಕ್ರಮದಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ ಕುಮಾರ್ , ಮುಖ್ಯೋಪಾಧ್ಯಾಯಿನಿಯರು ಶ್ರೀಮತಿ ಅನಿತಾ , ಅಪರ್ಣಾ , ಶಕುಂತಲಾ. ಜಿಲ್ಲಾ ಸಮಿತಿಯ ಶಾರೀರಿಕ ಪ್ರಮುಖ್ ವಿಜಯ ಕುಮಾರ್ ಶೆಟ್ಟಿ ,ಕ್ರೀಡಾಕೂಟ ಪ್ರಮುಖ್ ಶ್ರೀಮತಿ ಉಷಾ ಶೆಟ್ಟಿ ಉಪಸ್ಥಿತರಿದ್ದರು.
ಅಮೃತ ಭಾರತಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಪ್ರವೀಣ್ ಹೆಗ್ಡೆ , ನಿಶಾನ್ ಕುಮಾರ್ ಶೆಟ್ಟಿ , ವಿದ್ಯಾ ಕೇಂದ್ರ ಶಿಕ್ಷಕರು ರವೀಂದ್ರ ಶೆಟ್ಟಿ , ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಪಾವನ ,ಡುಯಲ್ ಸ್ಟಾರ್ ಅಮಾಸ ಬೈಲು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಕುಮಾರಿ ಪೂರ್ಣಿಮಾ , ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ದೈಹಿಕ ಶಿಕ್ಷಣ ಶಿಕ್ಷಕರು ಸಂತೋಷ್ ಖಾರ್ವಿ ಚದುರಂಗ ಸ್ಪರ್ಧೆಯ ನಿರ್ವಾಹಕರಾಗಿ ಜವಾಬ್ದಾರಿ ನಿರ್ವಹಿಸಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.