63
ಕುಂದಾಪುರ: ಯೋಗ ಬಂಧು ಕುಂದಾಪುರ ಇವರ ಆಶ್ರಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಕುಂದಾಪುರದ ಗಾಂಧಿ ಪಾರ್ಕ್ನಲ್ಲಿರುವ ಬಾಲಭವನದಲ್ಲಿ ಆಚರಿಸಲಾಯಿತು. ಡಾ| ಸೋನಿ ಡಿಕೋಸ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗಾಸನಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಪುರಸಭೆಯ ಮಾಜಿ ಸದಸ್ಯ ಶ್ರೀ ಶೇಖರ ಹುಂಚಾರ್‌ಬೆಟ್ಟು ಆಗಮಿಸಿದ್ದರು. ಯೋಗ ಗುರುಗಳಾದ ಶೀನ ಆಚಾರ್, ನಾಗೇಶ ಮತ್ತು ವಿಜಯಲಕ್ಷ್ಮಿ ಶೆಟ್ಟಿಯವರು ಉಪಸ್ಥಿತರಿದ್ದರು. ಯೋಗಬಂಧು ಗೋವಿಂದರಾಯರು ಕಾರ್ಯಕ್ರಮ ನಿರೂಪಿಸಿದರು. ಯೋಗಬಂಧು ಮೂಕಾಂಬಿಕಾ ಉಡುಪ ಪ್ರಾರ್ಥಿಸಿದರು. ಯೋಗಬಂಧುಗಳಾದ ಜಯರಾಮ ಶೆಟ್ಟಿ, ಭಾಸ್ಕರ ಗಾಣಿಗ, ಆದರ್ಶ ಹೆಬ್ಬಾರ್, ಶ್ರೀಧರ ಆಚಾರ್, ನಿತ್ಯಾನಂದ ಖಾರ್ವಿ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಹಲವಾರು ಶಿಬಿರಾರ್ಥಿಗಳು ಪಾಲ್ಗೊಂಡರು. ಶಿಬಿರವು ದಿನಾಂಕ 21.06.2026 ರಿಂದ 28.06.2026 ರವರಗೆ ಪ್ರತಿದಿನ ಸಂಜೆ ಗಂಟೆ 5.00 ರಿಂದ 6.30 ತನಕ ನಡೆಯಲಿದೆ.

