ಉಡುಪಿ : ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಧ್ಯೇಯೋದ್ದೇಶದಿಂದ ರಘುಪತಿ ಭಟ್ ಅವರು ಆರಂಭಿಸಿದ ಅವರ ಕನಸಿನ ಕೂಸು ಆರಂಭಿಸಿದ “ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ” ಇದರ ಗುರುಗಳೊಂದಿಗೆ ಸಮಾಲೋಚನಾ ಸಭೆ ಹಾಗೂ ಉಡುಪಿಯ ನಿಕಟಪೂರ್ವ ಶಾಸಕರು, ಯಕ್ಷ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ಅವರಿಂದ ಟ್ರಸ್ಟ್ ನ ನಿಯಮಾವಳಿಯಂತೆ ಉಡುಪಿಯ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅವರಿಗೆ “ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ” ಇದರ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸುವ ಕಾರ್ಯಕ್ರಮ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೆ. ರಘುಪತಿ ಭಟ್ ಅವರು ಯಕ್ಷ ಶಿಕ್ಷಣದಿಂದ ಯಕ್ಷಗಾನಕ್ಕೆ ಮತ್ತು ತರಬೇತಿ ಪಡೆದ ಮಕ್ಕಳಿಗೆ ಸಿಗುತ್ತಿರುವ ಪ್ರಯೋಜನವನ್ನು ತಿಳಿಸಿ ಇದು ನಿರಂತರವಾಗಿ ಮುಂದುವರಿಯಬೇಕು ಎಂದು ಹೇಳಿದರು. ಇದರ ಯಶಸ್ಸಿಗೆ ಶ್ರಮಿಸುತ್ತಿರುವ ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಮತ್ತು ಗುರುಗಳ ಶ್ರಮವನ್ನು ಸ್ಮರಿಸಿದರು. ಈ ಸಂದರ್ಭ ಶ್ರೀ ಕೆ. ರಘುಪತಿ ಭಟ್ ಅವರು ಟ್ರಸ್ಟ್ ನ ನಿಯಮಾವಳಿಯಂತೆ ಉಡುಪಿ ಶಾಸಕರಾಗಿ ಆಯ್ಕೆಯಾದ ಯಶ್ ಪಾಲ್ ಸುವರ್ಣರಿಗೆ “ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ” ಇದರ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿ ಗೌರವಿಸಿದರು.
ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಟ್ರಸ್ಟಿಗಳಾದ ಮೀನಾಲಕ್ಷಣಿ ಅಡ್ಯಂತಾಯ, ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ಮಂಜುನಾಥ ಮತ್ತು ಕಲಾರಂಗದ ಕಾರ್ಯಕರ್ತರು ಉಪಸ್ಥಿತರಿದ್ದರು