Home » ಯಕ್ಷಗಾನ ತಾಳ ಹೆಜ್ಜೆ ಅರ್ಥ ಶಿಬಿರದ ಸಮಾರೋಪ
 

ಯಕ್ಷಗಾನ ತಾಳ ಹೆಜ್ಜೆ ಅರ್ಥ ಶಿಬಿರದ ಸಮಾರೋಪ

ಯಕ್ಷಕಲೆಯನ್ನು ನಿರಂತರವಾಗಿಸಿಕೊಳ್ಳಿ- ಚಂದ್ರ ಪೂಜಾರಿ

by Kundapur Xpress
Spread the love

ಕೋಟ: ಇಂದು ಯಕ್ಷಗಾನದಂತಹ ಕಲೆಯನ್ನು ಅಭ್ಯಸಿಸಲು ಸಾಕಷ್ಟು ಅವಕಾಶಗಳು ಇವೆ. ಆದರೆ ಹಾಗೆ ಕಲಿಯುತ್ತಿರುವವರು ಮಧ್ಯದಲ್ಲೇ ಅದನ್ನು ನಿಲ್ಲಿಸಿಬಿಡುತ್ತಾರೆ.ಇದು ಯೋಗ್ಯವಲ್ಲ ಬದಲಾಗಿ ಕಲಿಕೆ ನಿರಂತರವಾಗಿ ಮುಂದುವರಿಯಬೇಕು ಎಂದು ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರ ಪೂಜಾರಿ ಕದ್ರಿಕಟ್ಟು ನುಡಿದರು.
ಇತ್ತೀಚಿಗೆ ರಸರಂಗ ಕೋಟ ಇವರು ಕೋಟ ಮಹಿಳಾ ಮಂಡಳದಲ್ಲಿ ಆಯೋಜಿಸಿದ್ದ ಇಪ್ಪತ್ತೊಂದು ದಿನಗಳ ಕಾಲದ ಯಕ್ಷಗಾನ ತಾಳ ಹೆಜ್ಜೆ ಅರ್ಥ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಪಠ್ಯವು ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿದರೆ ಕಲೆಯು ನಮ್ಮ ಹೃದಯವನ್ನು ಅರಳಿಸುವುದರೊಂದಿಗೆ ಸಂವೇದನೆಯನ್ನು ಹೆಚ್ಚಿಸುತ್ತದೆ . ಹಾಗಾಗಿ ಎಲ್ಲರೂ ಒಂದಲ್ಲ ಒಂದು ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಶಿಬಿರದ ಸಂಪನ್ಮೂಲ ವ್ಯಕ್ತಿ ಯಕ್ಷಗುರು ನರಸಿಂಹ ತುಂಗ ಅಭಿನಂದನೆ ಪಡೆದು ನುಡಿದರು.
ಕೋಟ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಕುಂದರ್ ,ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಮಾನಸ ಮಯ್ಯ ಸ್ವಾಗತಿಸಿ ಡಾ.ಸರಿತಾ ಉಪಾಧ್ಯಾಯ ವಂದಿಸಿದರು. ಶಿಬಿರಾರ್ಥಿಗಳಾದ ಶಿವಪ್ರಭ ಅಲ್ಸೆ ಹಾಗೂ ಪ್ರಭಾವತಿ ಆಚಾರ್ಯ ಶಿಬಿರದ ಕುರಿತಾದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮೂಕಾಂಬಿಕಾ ಮಯ್ಯ ಪ್ರಾರ್ಥಿಸಿ ,ವನಿತಾ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ಸುಧಾ ಮಣೂರುರವರ ನಿರ್ದೇಶನದಲ್ಲಿ ಕೃಷ್ಣಲೀಲೆ ಯಕ್ಷಗಾನ ಪ್ರಸಂಗ ಶಿಬಿರಾರ್ಥಿಗಳು ಪ್ರಸ್ತುತಪಡಿಸಿದರು.

ರಸರಂಗ ಕೋಟ ಇವರು ಕೋಟ ಮಹಿಳಾ ಮಂಡಳದಲ್ಲಿ ಆಯೋಜಿಸಿದ್ದ ಇಪ್ಪತ್ತೊಂದು ದಿನಗಳ ಕಾಲದ ಯಕ್ಷಗಾನ ತಾಳ ಹೆಜ್ಜೆ ಅರ್ಥ ಶಿಬಿರದ ಸಮಾರೋಪದಲ್ಲಿ ಯಕ್ಷಗುರು ನರಸಿಂಹ ತುಂಗ ಇವರನ್ನು ಅಭಿನಂದಿಸಲಾಯಿತು. ಕೋಟ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಕುಂದರ್ ,ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು.

   

Related Articles

error: Content is protected !!