ಕುಂದಾಪುರ: ಶ್ರೀರಾಮಕೃಷ್ಣ ಮಠ, ಮತ್ತು ದೇಲಂಪಾಡಿ ಯೋಗ ಪ್ರತಿಷ್ಟಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆದ ರಜತಾಭಿನಂದನೆ ಕಾರ್ಯಕ್ರಮದಲ್ಲಿ ಸುಮಾರು 30 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಉಚಿತ ಸೇವೆಯನ್ನು ನೀಡುತ್ತಿರುವ ಯೋಗ ಬಂಧು ಸಂಜೀವಣ್ಣ ಕುಂದಾಪುರ ಇವರನ್ನು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿಯವರ ದಿವ್ಯ ಸಾನಿಧ್ಯದಲ್ಲಿ ಶಾಲು ಹೊದಿಸಿ, ಫಲಪುಷ್ಪ ನೀಡಿ, ಪೇಟ ತೊಡಿಸಿ, ರಜತಾಭಿನಂದನೆ ಪತ್ರ ಹಾಗೂ ಸ್ಮರಣಿಕೆ ನೀಡಿ, ಬಹಳ ವಿಜೃಂಭಣೆಯಿಂದ ನೂರಾರು ಯೋಗ ಸಾಧಕರ ಸಮ್ಮುಖದಲ್ಲಿ ಗೌರವಿಸಲಾಯಿತು.
ದಿವ್ಯ ಸಾನಿಧ್ಯ ವಹಿಸಿದ ಸ್ವಾಮಿ ಜಿತಕಾಮಾನಂದಜಿಯವರು ಆಶೀರ್ವಚನ ನೀಡುತ್ತಾ, ಇಂದು ರಜತಾಭಿನಂದನೆ ಸ್ವೀಕರಿಸಿದ ಎಲ್ಲಾ 29 ಯೋಗ ಗುರುಗಳ ಸೇವೆ ಬಹಳ ಅಮೂಲ್ಯವಾದದ್ದು. ನಿಮ್ಮಂತಹ ಯೋಗ ಗುರುಗಳಿಂದಲೇ ಈ ಪ್ರಕೃತಿಯಲ್ಲಿ ಒಂದು ಮಹಾನ್ ಪರಿವರ್ತನೆ ಆಗಲಿದೆ. ತಾವೆಲ್ಲರೂ ಮುಂದೆಯೂ ಸಹ ಇದೇ ರೀತಿ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಪರಮಾತ್ಮ ತಮ್ಮೆಲ್ಲರಿಗೂ ಶಕ್ತಿ, ಉತ್ತಮ ಆರೋಗ್ಯ, ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.
ಸಮಾರಂಭದಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಸುಮಾರು 29 ಮಂದಿ ಯೋಗ ಗುರುಗಳಿಗೆ ಬಹಳ ಅದ್ಧೂರಿಯಾಗಿ ರಜತಾಭಿನಂದನೆಯ ಗೌರವವನ್ನು ಅರ್ಪಿಸಲಾಯಿತು. ಸಭಾ ವೇದಿಕೆಯಲ್ಲಿ ಡಾ. ಮಹಮ್ಮದ್ ಇಕ್ಬಾಲ್, ದ. ಕ. ಜಿಲ್ಲಾ ಆಯುμï ಅಧಿಕಾರಿಗಳು, ಮತ್ತು ಡಾ. ಸುರೇಶ್ ದೇಲಂಪಾಡಿ, ಪ್ರೊ. ಆರ್.ಎನ್.ಎಸ್. ತಾಂತ್ರಿಕ ವಿದ್ಯಾಲಯ ಬೆಂಗಳೂರು, ಇವರುಗಳು ಮುಖ್ಯ ಅತಿಥಿಗಳಾಗಿದ್ದು, ತಮ್ಮ ಯೋಗಾನುಭವಗಳನ್ನು ಹಂಚಿಕೊಂಡರು. ಯೋಗ ಶಿಕ್ಷಕ ಸಂತೋಷಣ್ಣ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಕೊನೆಯಲ್ಲಿ ಶ್ರೀಯುತ ದೇಲಂಪಾಡಿಯವರು ಈಗ ಸನ್ನಾನಿಸಿದ 29 ಮಂದಿ ಯೋಗ ಗುರುಗಳ ಹೆಸರುಗಳನ್ನು ಆಯುμï ಇಲಾಖೆಯಲ್ಲಿ ರಿಜಿಸ್ಟರ್ ಮಾಡಿಕೊಂಡು, ಅವರ ಸೇವಾ ಕಾರ್ಯಕ್ಕೆ ಸರಕಾರದ ವತಿಯಿಂದ ಸಹಕಾರ ನೀಡಬೇಕು ಎಂದು ವಿನಂತಿ ಮಾಡಿಕೊಂಡರು