ಕುಂದಾಪುರ : ಕುಂದಾಪುರ ತಾಲೂಕು ಆಜ್ರಿ ಗ್ರಾಮದ ಬಾಂಡ್ಯ ಹೊಳೆಕಡು ಎಂಬಲ್ಲಿ ಬಾಂಡ್ಯಾ ಹೊಳೆಯ ದಡದಲ್ಲಿ ಕೋಳಿ ಪಡೆಯಲ್ಲಿ ನಿರತರಾಗಿದ್ದ 2 ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದು 7 ಮಂದಿ ಪರಾರಿಯಾಗಿದ್ದಾರೆ
ಕೋಳಿಗಳನ್ನು ಹಿಂಸಾತ್ಮಕವಾಗಿ ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಹಣವನ್ನು ಪಣವಾಗಿಟ್ಟು ಜೂಜಾಟಕ್ಕಾಗಿ ಕೋಳಿ ಅಂಕ ಆಟ ಅಡುತ್ತಿದ್ದ ಕೋಳಿಪಡೆ ಅಂಕಣದ ಬಗ್ಗೆ ಖಚಿತ ಮಾಹಿತಿ ಪಡೆದು ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸ್ಐ ನಾಸೀರ್ ಹುಸೇನ್ ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೋಳಿಪಡೆಯಲ್ಲಿ ನಿರತರಾಗಿದ್ದ ಸುಧೀರ್ ಶೆಟ್ಟಿ, ಹಾಗೂ ಸುಧಾಕರ ಶೆಟ್ಟಿ ಎಂಬವರನ್ನು ಬಂಧಿಸಿದ್ದು ಅಶೋಕ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಪ್ರಸಾದ ಶೆಟ್ಟಿ, ಅರುಣ್ ಶೆಟ್ಟಿ, ಅರುಣ ನೀರ್ಜಡ್ಡು, ಬುಟ್ಟಿ ಭಾಸ್ಕರ ಹಾಗೂ ಗುಂಡು ಶೆಟ್ಟಿ ಎಂಬವರು ಪರಾರಿಯಾಗಿದ್ದಾರೆ
ಕೋಳಿ ಅಂಕ ಆಟದ ಬಗ್ಗೆ ಉಪಯೋಗ ಮಾಡಿದ ಕೋಳಿ ಹುಂಜ-3 (ಅಂದಾಜು ಮೌಲ್ಯ 1500). ಕೋಳಿ ಕತ್ತಿ (ಬಾಳು)-4, ಕೋಳಿಗಳನ್ನು ತುಂಬಲು ಬಳಸಿದ ಬಿಣಿ ಚೀಲ-2 ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ ನಗದು ಹಣ 1,120/- ರೂ , ಆಪಾದಿತ ಸುಧೀರ್ ಶೆಟ್ಟಿಯ ಫೋನ್ SAMSUNG MOBILE-1 (ಅಂದಾಜು ಮೌಲ್ಯ 4,000/-), ಸುಧಾಕರ ಶೆಟ್ಟಿ ಯ ವಶದಲ್ಲಿದ್ದ VIVO MOBILE-1 (ಅಂದಾಜು ಮೌಲ್ಯ 5,000/-) ಸ್ವಾದೀನ ಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ 11,620/- ರೂ ಆಗಿದ್ದು ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

