ಕುಂದಾಪುರ :ಶಂಕರನಾರಾಯಣ ಅರಣ್ಯ ಇಲಾಖೆ ವ್ಯಾಪ್ತಿಯ ವಂಡಾರು ಗ್ರಾಮದಲ್ಲಿ ಗುರುವಾರ ರಾತ್ರಿ ವನ್ಯಜೀವಿ ಬೇಟೆಗೆ ಹೊಂಚು ಹಾಕುತ್ತಿದ್ದ ಭಟ್ಕಳ- ಶಿರೂರು ಮೂಲದ ಮೂವರು ಆರೋಪಿಗಳನ್ನು ಶಂಕರನಾರಾಯಣ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ
ಬಂಧಿತರಿಂದ ಒಂದು ಬಂದೂಕು, 11 ಕಾಡತೂಸು, 4 ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಒಂದು ಟಾರ್ಚ್, ಮೂರು ಮೊಬೈಲ್, ಆರೋಪಿಗಳು ಬಳಸಿದ್ದ ಒಂದು ಆಟೋ ರಿಕ್ಷಾ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ (23 ) ಮುಂಡಳ್ಳಿ ಭಟ್ಕಳ, ವಾಸೀಂ ಅಕ್ರಂ ಶಿರೂರು (34), ಅಲಿ ಬಾಪು ಯಾಸಿನ್ ಶಿರೂರು (36) ಬಂಧಿತ ಆರೋಪಿಗಳು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ.ಡಿ.ದಿನೇಶ್, ಪ್ರಕಾಶ್ ಪೂಜಾರಿ, ವಲಯ ಅರಣ್ಯಾಧಿಕಾರಿಗಳಾದ ಜ್ಯೋತಿ, ಸಂದೇಶ್ ಕುಮಾರ್, ಗಣಪತಿ ವಿ.ನಾಯ್ಕ, ಶಂಕರನಾರಾಯಣ ವಲಯ, ಸಿದ್ದಾಪುರ ವನ್ಯಜೀವಿ ವಲಯ, ಆಗುಂಬೆ ವನ್ಯಜೀವಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.