Home » ನಾಲ್ವರ ಬಂಧನ : 12.50 ಲಕ್ಷ ಸೊತ್ತು ವಶ
 

ನಾಲ್ವರ ಬಂಧನ : 12.50 ಲಕ್ಷ ಸೊತ್ತು ವಶ

by Kundapur Xpress
Spread the love

ಮಂಗಳೂರು: ಮಂಗಳೂರಿನ ಕೊಣಾಜೆ ಪರಿಸರದಲ್ಲಿ ಮನೆಗೆ ನುಗ್ಗಿ ಕಳ್ಳತನದ ಮೂಲಕ ನಿದ್ದೆಗೆಡಿಸಿದ್ದ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಳೆದ ಎರಡು ಮೂರು ತಿಂಗಳಿನಿಂದ ಈ ಭಾಗದ ಜನತೆ ಕಳ್ಳರ ಹಾವಳಿಯಿಂದ ಭಯಭೀತರಾಗಿದ್ದರು. ಮನೆಗೆ ನುಗ್ಗಿ ಕಳ್ಳತನ ನಡೆಸುವ ಪ್ರಕರಣಗಳು ಹೆಚ್ಚಿದ್ದು, ಇದೀಗ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ರೂ. 12.50 ಲಕ್ಷರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು. ಮಂಜೇಶ್ವರ ಮೂಲದ ಮಹಮ್ಮದ್ ಸಿಯಾಬ್ ಯಾನೆ ಸಿಯಾ, ಬಜಪೆ ಮೂಲದ ಮಹಮ್ಮದ್ ಅರ್ಪಾಜ್ ಯಾನೆ ಅರ್ಪಾ ಮತ್ತು ಸಪ್ಪಾನ್ ಯಾನೆ ಸಪ್ಪಾ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಟ್ಟು 130 ಗ್ರಾಂ ತೂಕದ ಚಿನ್ನಾಭರಣ, 1 ವಾಚ್, ಕಾರು ಸೇರಿದಂತೆ ಒಟ್ಟು 12,50,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು

ಈ ಆರೋಪಿಗಳು ಮೂರು ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಬೀಗ ಹಾಕಿದ ಮನೆಗಳನ್ನು ಬೀಗ ಒಡೆದು ಒಟ್ಟು 9,25,000 ರು. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು. ಜು.10ರಂದು ಕೊಣಾಜೆ ಠಾಣಾ ಪಿಎಸ್‌ಐ ವಿನೋದ್ ಹಾಗೂ ಸಿಬ್ಬಂದಿಗಳು ಬೆಳಗಿನ ಜಾವ ಪಾತೂರು ಕಡೆಯಿಂದ ಮುದುಂಗಾರಕಟ್ಟೆ ಚೆಕ್ ಪಾಯಿಂಟ್ ಬಳಿ ಕಾರಿನಲ್ಲಿ ಬಂದ ಮೂರು ಮಂದಿಯನ್ನು ವಿಚಾರಿಸಿದ್ದಾರೆ. ಕಾರನ್ನು ತಪಾಸಣೆಯನ್ನು ನಡೆಸಿದಾಗ ಕಾರಿನಲ್ಲಿ 2 ಡ್ರಾಗನ್. 3 ಡಮ್ಮಿ ಪಿಸ್ತೂಲ್, ಮಂಕಿ ಕ್ಯಾಪ್ ಗಳು, ಹಾಗೂ ಹ್ಯಾಂಡ್ ಗೌಸ್ ಹಾಗೂ ಮನೆಯ ಬಾಗಿಲನ್ನು ಒಡೆಯಲು ಉಪಯೋಗಿಸುವ ಸಲಕರಣೆ ಪತ್ತೆಯಾಗಿದೆ. ಈ ವೇಳೆ ವಾಹನದಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಕೃತ್ಯ ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ

   

Related Articles

error: Content is protected !!