Home » ಸಾಲ ಕೊಡಿಸುವ ನೆಪದಲ್ಲಿ ವಂಚನೆ : ಆರೋಪಿ ಸೆರೆ
 

ಸಾಲ ಕೊಡಿಸುವ ನೆಪದಲ್ಲಿ ವಂಚನೆ : ಆರೋಪಿ ಸೆರೆ

ಮನೆಯೊಳಗೇ ಅಡಗುದಾಣ

by Kundapur Xpress
Spread the love

ಮಂಗಳೂರು : ಹಲವಾರು ಮಂದಿ ಶ್ರೀಮಂತ ಉದ್ಯಮಿಗಳಿಗೆ ಕೋಟ್ಯಂತರ ರೂ. ವಂಚಿಸಿ ಮನೆಯೊಳಗೇ ಅಡಗುದಾಣವೊಂದನ್ನು ನಿರ್ಮಿಸಿ, ಯಾರ ಕಣ್ಣಿಗೂ ಬೀಳದೆ ಐಷಾರಾಮಿ ಜೀವನ ನಡೆಸುತ್ತಿದ್ದ ಖತರ್‌ನಾಕ್ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ ಮಂಗಳೂರಿನ ಜಪ್ಪಿನ ಮೊಗರು ನಿವಾಸಿ ರೋಶನ್ ಸಲ್ದಾನಾ (43) ಬಂಧಿತ ಆರೋಪಿ

ಆರೋಪಿಯು ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ. ಆತನ ವ್ಯವಹಾರ ಪರಿಶೀಲಿಸಿದಾಗ ಆತ ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೋಲ್ಕತಾ, ಸಾಂಗ್ಲಿ, ಲಖನೌ, ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂ.ಗಳನ್ನು ಪಡೆದು ಕೊಂಡಿರುವುದು ದೃಢಪಟ್ಟಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾ‌ರ್ ರೆಡ್ಡಿ ತಿಳಿಸಿದ್ದಾರೆ. ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

 

Related Articles

error: Content is protected !!