Home » ಲಂಚ ಆರೋಪ : ಐವರು ಪೊಲೀಸರ ಅಮಾನತು
 

ಲಂಚ ಆರೋಪ : ಐವರು ಪೊಲೀಸರ ಅಮಾನತು

by Kundapur Xpress
Spread the love

ಮಂಗಳೂರು : ಲಂಚದ ಬೇಡಿಕೆ ಇರಿಸಿದ ಪ್ರಕರಣದಲ್ಲಿ 5 ಮಂದಿಯನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್‌ ರೆಡ್ಡಿ ಆದೇಶಿಸಿದ್ದಾರೆ. ಲಂಚದ ಬೇಡಿಕೆಯಿರಿಸಿದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್‌ ಸಿಬ್ಬಂದಿಗಳಾದ ತಸ್ಲಿಂ ಹಾಗೂ ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ತಸ್ಲಿಂ ಮತ್ತು ವಿನೋದ್ ಲಂಚ ಬೇಡಿಕೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮೌನವಹಿಸಿದ್ದ ಮತ್ತೆ ಮೂವರನ್ನೂ ಕೂಡಾ ಅಮಾನತುಗೊಳಿಸಿ ಕಮಿಷನರ್ ಖಡಕ್ ಸಂದೇಶ ನೀಡಿದ್ದಾರೆ.

 

Related Articles

error: Content is protected !!