ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಳ್ಳಿಕಟ್ಟೆ ಸಮೀಪದ ಮೊವಾಡಿಯಲ್ಲಿ ಕಪ್ಪು ಬಸವವೊಂದು ಅಡ್ಡ ಬಂದ ಪರಿಣಾಮ ಕಾರು ಡಿಕ್ಕಿಯಾಗಿ ಕರಿ ಬಸವ ಸತ್ತು ಕಾರು ಜಖಂಗೊಂಡ ಘಟನೆ ನಿನ್ನೆ ಗುರುವಾರ ಸಂಜೆ 7.30ರ ಸುಮಾರಿಗೆ ನಡೆದಿದೆ.
ಉಡುಪಿ ಮೂಲದ ಎರ್ಟಿಗಾ ಬಾಡಿಗೆ ಕಾರಿನಲ್ಲಿ ಮುರುಡೇಶ್ವರ ಹೋಗಿ ಮರವಂತೆ ಬೀಚ್ ಮುಗಿಸಿ ವಾಪಾಸು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಕಾರಿನಲ್ಲಿ ಐವರು ಸಂಚರಿಸುತ್ತಿದ್ದು ಯಾರಿಗೂ ಸಣ್ಣ ಪುಟ್ಟ ಗಾಯವಾಗಿಲ್ಲ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆಯಿದ್ದು, ತ್ರಾಸಿಯಿಂದ ಮುಳ್ಳಿಕಟ್ಟೆಯ ವರೆಗೂ ಬೀದಿ ದೀಪ ಇಲ್ಲದೇ ಇರುವುದಿಂದ ವಾಹನ ಚಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ರಸ್ತೆ ಮಧ್ಯೆ ದಟ್ಟವಾದ ಹುಲ್ಲು ಕಳೆಗಳು ಬೆಳೆದಿರುವುದರಿಂದ ಜಾನುವಾರುಗಳು ಮೇಯಲು ಹೆದ್ದಾರಿಯಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ