Home » ನಿಶ್ಚಿತಾರ್ಥ ಆಗಿದ್ದ ಯುವತಿ ಅಪಘಾತಕ್ಕೆ ಬಲಿ
 

ನಿಶ್ಚಿತಾರ್ಥ ಆಗಿದ್ದ ಯುವತಿ ಅಪಘಾತಕ್ಕೆ ಬಲಿ

by Kundapur Xpress
Spread the love

ಮಂಗಳೂರು: ನಗರದ ನಂತೂರು ಬದ್ದೋಡಿ ಸಮೀಪ ದ್ವಿಚಕ್ರ ವಾಹನ ಮತ್ತು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಯುವತಿ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ. ಕೋಡಿಕಲ್ 5ನೇ ಅಡ್ಡರಸ್ತೆ ನಿವಾಸಿ ಕ್ರಿಸ್ಟಿ ಕ್ರಾಸ್ತಾ (27 ವರ್ಷ) ಮೃತಪಟ್ಟ ನತದೃಷ್ಟ ಯುವತಿ ಎಂದು ತಿಳಿದುಬಂದಿದೆ

ಯುವತಿ ನಗರದ ಖಾಸಗಿ ಸಂಸ್ಥೆಯಲ್ಲಿ ಸ್ಪೀಚ್ ಆ್ಯಂಡ್ ಹಿಯರಿಂಗ್‌ ತರಬೇತಿ ನೀಡುತ್ತಿದ್ದರು. ಭಾನುವಾರ ಸಂಜೆ ಯುವತಿ ತನ್ನ ದ್ವಿಚಕ್ರ. ವಾಹನದಲ್ಲಿ ಕೋಡಿಕಲ್‌ನಿಂದ ಪಂಪ್‌ವೆಲ್‌ನತ್ತ ತೆರಳುತ್ತಿದ್ದರು. ಬಟ್ಟೋಡಿ ಶಾಂತಿಕಿರಣ್ ಸಮೀಪ ಏಕಾಏಕಿ ಸ್ಕೂಟರ್‌ಸ್ಕಿಡ್ ಆಗಿ ಯುವತಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಮೀನು ತುಂಬಿದೆ ಲಾರಿಯೊಂದು ಕೇರಳ ಕಡೆಗೆ ತೆರಳುತ್ತಿದ್ದು, ಲಾರಿಯ ಹಿಂಬದಿ ಚಕ್ರಕ್ಕೆ ಯುವತಿಯ ತಲೆ ಸಿಲುಕಿದೆ. ಇದರ ಪರಿಣಾಮ ಕ್ರಿಸ್ಟಿ ಕ್ರಾಸ್ತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯುವತಿಗೆ ವಿವಾಹ ನಿಶ್ಚಯವಾಗಿದ್ದು, ನವೆಂಬರ್‌ನಲ್ಲಿ ದಿನಾಂಕ ನಿಗದಿಯಾಗಿತ್ತು. ಯುವತಿ ತಂದೆ-ತಾಯಿ ಸಹೋದರನನ್ನು ಅಗಲಿದ್ದಾರೆ. ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!