ಕುಂದಾಪುರ : ನಗರ ಸಮೀಪದ ಹಂಗಳೂರಿನ ಸರ್ಜನ್ಸ್ ಆಸ್ಪತ್ರೆಯ ಎದುರುಗಡೆಯಲ್ಲಿ ಸ್ಕೂಟಿ ಹಾಗೂ ಬೈಕ್ ಮದ್ಯೆ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಸವಾರರು ಆಸ್ಪತ್ರೆ ಸೇರಿದ ಘಟನೆ ನಡೆದಿದೆ
ಹಂಗಳೂರಿನ ಸರ್ವಿಸ್ ರಸ್ತೆಯಲ್ಲಿ ಕೋಟೇಶ್ವರ ಕಡೆಯಿಂದ ಕುಂದಾಪುರದ ಕಡೆಗೆ ಸ್ಕೂಟಿ ಸವಾರ ಶಫಿ ನಿಧಾನವಾಗಿ ಸವಾರಿ ಮಾಡಿಕೊಂಡು ಸರ್ಜನ್ ಆಸ್ಪತ್ರೆ ಹತ್ತಿರ ತಲುಪುಷ್ಟರಲ್ಲಿ ಎದುರಿನಿಂದ ವಿರುದ್ಧ ದಿಕ್ಕಿನಲ್ಲಿ ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ ಬಂದ ಬೈಕ್ ಸವಾರ ಆದಿತ್ಯ ಎಂಬವರು ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಫಿ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಾಹನಗಳೊಂದಿಗೆ ರಸ್ತೆಗೆ ಬಿದ್ದಿದ್ದು ಶಫಿಗೆ ತಲೆಗೆ ಕಣ್ಣಿಗೆ, ಮೂಗಿಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು ಬೈಕ್ ಸವಾರ ಆದಿತ್ಯನಿಗೆ ಸಣ್ಣಪುಟ್ಟ ತರಚಿದ ರಕ್ತ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಹತ್ತಿರ ಸರ್ಜನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದ್ದು ಅಲ್ಲಿಂದ ವೈಧ್ಯರ ಸಲಹೆಯಂತೆ ಶಫಿಯನ್ನು ಹೆಚ್ಚಿನ ಚಿಕಿತ್ಸೆಗೆ ಕೆ.ಎಮ್.ಸಿ. ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ