ಕುಂದಾಪುರ :ತೆಕ್ಕಟ್ಟೆ ಬಳಿಯ ರಾ.ಹೆ. 66 ರ ಏಕದಂತ ಸರ್ವಿಸ್ ಸ್ಟೇಷನ್ ಎದುರು ಕಾರೊಂದು ಡಿವೈಡರ್ ಮೇಲೇರಿ ವಿರುದ್ದ ದಿಕ್ಕಿನಲ್ಲಿ ಐಸ್ ಕ್ರೀಮ್ ಸಾಗಿಸುತ್ತಿದ್ದ ಟೆಂಪೋಗೆ ಮುಖಾಮುಖಿ ಢಿಕ್ಕಿ ಹೊಡೆದು ಎರಡು ವಾಹನ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ
ಕಾರಿನ ಚಾಲಕ ರಘುವೀರ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ. ಮುಳ್ಳುಗುಡ್ಡೆಯ ಐಸ್ಕ್ರೀಮ್ ವಾಹನ ಚಾಲಕ ಗಿರೀಶ್ (24) ಅವರಿಗೂ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ