ಕುಂದಾಪುರ : ಕುಂದಾಪುರ ನಗರ ಸಮೀಪದ ತಲ್ಲೂರು ಬ್ರಿಡ್ಜ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಅಪರಿಚಿತ ವಾಹನವೊಂದು ಪಾದಾಚಾರಿಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ ಢಿಕ್ಕಿಯ ರಭಸಕ್ಕೆ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಹೊನ್ನಾವರ ತಾಲೋಕಿನ ಗೇರುಸೊಪ್ಪದ ನಿವಾಸಿ ಮೇಘನಾಥ್ ಮೇಸ್ತ (39 ವರ್ಷ) ಎಂದು ತಿಳಿದು ಬಂದಿದೆ
ಮೇಘನಾಥ್ ಎಂಬವರು ಕೆಲಸ ಮುಗಿಸಿ ತ್ರಾಸಿಯಲ್ಲಿರುವ ತನ್ನ ಆಕ್ಕನ ಮನೆಗೆ ತೆರಳಲು ಬಸ್ ಸಿಗದೇ ಇದ್ದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಮಧ್ಯರಾತ್ರಿ 12.45 ಕ್ಕೆ ಈ ದುರ್ಘಟನೆ ನಡೆದಿದೆ
ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಢಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನಕ್ಕಾಗಿ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ