ಉಳ್ಳಾಲ : ಟೆಂಪೊ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ನಡುಪದವು ಕಾಟುಕೋಡಿ ನಿವಾಸಿ ಮೊಯ್ದಿನ್ ಕುಂಞ ಬಾವು ಅವರ ಪುತ್ರ ಅಬೂಬಕರ್ ಸಿದ್ದೀಖ್ ರಝ್ವಿ (22 ವರ್ಷ) ಅವರು ಸಾವನ್ನಪ್ಪಿರುವ ಘಟನೆ ಕೊಣಾಜೆ ನಡುಪದವು ಬಳಿ ಸಂಭವಿಸಿದೆ.
ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಸ್ಕೂಟರ್ ಮತ್ತು ಮುಡಿಪು ಕಡೆಯಿಂದ ಬರುತ್ತಿದ್ದ ಎಸ್ ಟೆಂಪೋ ಪರಸ್ಪರ ಢಿಕ್ಕಿಯಾಗಿದೆ. ಅಬೂಬಕರ್ ಕಾಸರಗೋಡಿನ ಅರಬಿಕ್ ಶರೀಅತ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಘಟನೆಯಲ್ಲಿ ಟೆಂಪೋ ಚಾಲಕ ಕೂಡ ಗಾಯಗೊಂಡಿದ್ದಾರೆ