Home » ಬೈಕ್‌ ಬೈಕ್‌ ಡಿಕ್ಕಿ : ಭಾಗವತ ಮೃತ್ಯು
 

ಬೈಕ್‌ ಬೈಕ್‌ ಡಿಕ್ಕಿ : ಭಾಗವತ ಮೃತ್ಯು

by Kundapur Xpress
Spread the love

ಬೆಳ್ತಂಗಡಿ : ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ ಸಾವನ್ನಪ್ಪಿದ ಘಟನೆ ನಡೆದಿದೆ ಮಾರಿಕಾಂಬಾ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಸಂಭವಿಸಿದೆ.ಮೃತರನ್ನು ಅಂಡಿಂಜೆ ಗ್ರಾಮದ ಪಿಲಿಯೂರು ಮನೆ ನಿವಾಸಿ ಸತೀಶ್ ಆಚಾರ್ಯ (40 ವರ್ಷ) ಎಂದು ಗುರುತಿಸಲಾಗಿದೆ.

ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತರಾಗಿದ್ದ ಸತೀಶ್ ಆಚಾರ್ಯ ಇವರು ಸುಳ್ಯದಲ್ಲಿ ನಡೆದ ಯಕ್ಷಗಾನ ಮುಗಿಸಿ ತಮ್ಮ ಬೈಕ್‌ನಲ್ಲಿ ಅಂಡಿಂಜೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡ ಇವರು ಸ್ಥಳದಲ್ಲೇ ಮೃತರಾಗಿದ್ದಾರೆ.

ಅಪಘಾತದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ ಸವಾರ ಕೂಡ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಸತೀಶ್‌ ಆಚಾರ್ಯರಿಗೆ ತಾಯಿ, ಸಹೋದರಿ, ಸಹೋದರ ಇದ್ದಾರೆ.
ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!