Home » ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ : ಓರ್ವ ಸಾವು
 

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ : ಓರ್ವ ಸಾವು

by Kundapur Xpress
Spread the love

ಕುಂದಾಪುರ : ಬೈಕೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ ಇನ್ನೊರ್ವ  ಗಾಯಗೊಂಡ ಘಟನೆ ನಡೆದಿದೆ ಅಪಘಾತದಲ್ಲಿ ಮಹಮ್ಮದ್‌ ಕೈಸ್‌ ಕಿದಿಯೂರು ಮೃತಪಟ್ಟಿದ್ದು ಅಸಾನ್‌ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ

ತ್ರಾಸಿಯಿಂದ ಗಂಗೊಳ್ಳಿ ಸಂಪರ್ಕಿಸುವ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀ ಮಾರಿಕಾಂಬೆ ದೇವಸ್ಥಾನ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಬೈಕ್ ಸವಾರರು ಮದುವೆ ಮುಗಿಸಿ ಮರಳಿ ಮನೆಗೆ ಮರಳುವ ವೇಳೆ ಇನ್ನೊಂದು ಬೈಕ್ ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ  ಗಾಯಗೊಂಡಿದ್ದಾನೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!