Home » ಬಸ್ ಮತ್ತು ಪಿಕಪ್ ವಾಹನ ಡಿಕ್ಕಿ : ಓರ್ವ ಸಾವು
 

ಬಸ್ ಮತ್ತು ಪಿಕಪ್ ವಾಹನ ಡಿಕ್ಕಿ : ಓರ್ವ ಸಾವು

ಮತ್ತೋರ್ವ ಗಂಭೀರ

by Kundapur Xpress
Spread the love

ಹಿರಿಯಡಕ : ಖಾಸಗಿ ಬಸ್ ಮತ್ತು ಪಿಕಪ್ ವಾಹನ ನಡುವೆ ನಡೆದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಉಡುಪಿ ಸಮೀಪದ ಹಿರಿಯಡಕದ ಗಂಪ ಕ್ರಾಸ್ ಬಳಿ ನಡೆದಿದೆ

ಘಟನೆಯಲ್ಲಿ ಪಿಕಪ್ ವಾಹನದಲ್ಲಿ ಕುಳಿತಿದ್ದ ಸಹ ಸವಾರ ಅಚ್ಚುತ ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಚಾಲಕ ರಾಘವೇಂದ್ರ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಕಾರ್ಕಳದಿಂದ ಉಡುಪಿಗೆ ಕಡೆಗೆ ಬರುತಿದ್ದ ಪಿಕಪ್ ವಾಹನಕ್ಕೆ ಉಡುಪಿಯಿಂದ ಕಾರ್ಕಳ ಕಡೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಸಂಪೂರ್ಣ ಜಖಂಗೊಂಡಿದೆ

 ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 

Related Articles

error: Content is protected !!