Home » ಸುಚಿ ಅಟೋ ಮಾಲಕ ಗಣೇಶ್‌ ಬೈಕ್‌ ಅಪಘಾತ
 

ಸುಚಿ ಅಟೋ ಮಾಲಕ ಗಣೇಶ್‌ ಬೈಕ್‌ ಅಪಘಾತ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಚಿಕ್ಕನಸಾಲ್‌ ರಸ್ತೆಯಲ್ಲಿರುವ ಸುಚಿ ಅಟೋ ವರ್ಕ್ಸ್‌ ಮಾಲಕರಾದ ಕೆ ಟಿ ಗಣೇಶ್‌ ಎಂಬವರ ಬೈಕಿಗೆ ಕೆ ಎಸ್‌ ಆರ್‌ ಟಿ ಸಿ ಬಸ್‌ ಡಿಕ್ಕಿ ಹೊಡೆದಿದೆ 

ಸಾಗರ ಸಮೀಪದ ವರದ ಹಳ್ಳಿಯಲ್ಲಿರುವ ಶ್ರೀಧರ ಸ್ವಾಮಿಯವರ ಮಠಕ್ಕೆ ಭೇಟಿ ನೀಡಿ ಸಾಗರಕ್ಕೆ ತೆರಳುವ ರಸ್ತೆಯಲ್ಲಿ ಕೆ ಎಸ್‌ ಆರ್‌ ಟಿ ಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ  ಗಣೇಶ್‌ ರವರ ಎರಡು ಕೈಗಳು ಮೂಳೆ ಮುರಿತಕ್ಕೆ ಒಳಗಾಗಿದೆ ಸಹಸವಾರ ಚಿಕ್ಕನ್‌ ಸಾಲು ರಸ್ತೆಯ ಸಂಗಮ್‌ ಬಳಿಯ ನಿವಾಸಿ ಮನೋಹರ್‌ ಎಂಬವರ ದವಡೆ ಹಾಗೂ ಮುಖಕ್ಕೆ ಪೆಟ್ಟಾಗಿದ್ದು ತಕ್ಷಣ ಅವರನ್ನು ಸಮೀಪದ ಆರೈಕೆ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅಂಬುಲೆನ್ಸ್‌ ಮೂಲಕ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಇಬ್ಬರು ಅಪಾಯದಿಂದ ಪಾರಾಗಿದ್ದು ಸಾಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!