160
ಕುಂದಾಪುರ : ನಗರದ ರಾಮಕ್ಷತ್ರಿಯ ಯುವಕ ಮಂಡಳಿಯ ಆಶ್ರಯದಲ್ಲಿ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಾಮಕ್ಷತ್ರಿಯ ಸಮಾಜ ಭಾಂಧವರಿಗಾಗಿ ಅಂತರಾಜ್ಯಮಟ್ಟದ ರಾಮಕ್ಷತ್ರಿಯ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾಟವು ಉದ್ಘಾಟನೆಗೊಂಡಿತು
ನಿನ್ನೆ ಶನಿವಾರ ಸಂಜೆ ವಾಲಿಬಾಲ್ ಉದ್ಘಾಟನಾ ಪಂದ್ಯದ ಸಮಾರಂಭಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಆಗಮಿಸಿ ಶುಭ ಹಾರೈಸಿದರು
ಉದ್ಘಾಟನಾ ಸಮಾರಂಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ರವಿಶಂಕರ್ ಕೆ ಡಾ. ಕೃಷ್ಣಮೂರ್ತಿ ಹವಲ್ದಾರ್ ಗಣೇಶ್ ಬಾಳಯ್ಯನ ಮನೆ ಗುರುಚರಣ್ ರಾಮಕ್ಷತ್ರಿಯರ ಸಂಘದ ಅಧ್ಯಕ್ಷ ಲಕ್ಷ್ಮೀಶ ಹವಲ್ದಾರ್ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಅಧ್ಯಕ್ಷೆ ಸರೋಜಾ ಅರುಣ್ ಕುಮಾರ್ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷ ರಾಜೇಶ್ ಪಡುಕೇರಿ ಕಾರ್ಯದರ್ಶಿ ಅನಿಲ್ ಕುಮಾರ್ ಕ್ರೀಡಾ ಕಾರ್ಯದರ್ಶಿ ರಾಮು ಹೆಗ್ಡೆ ಹಾಗೂ ರವಿ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು
ಮಧುಸೂದನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

