122
ಹೆಬ್ರಿ : ಟಿವಿಎಸ್ ಮೊಪೆಡ್ ಗೆ ಮಹಿಂದ್ರಾ ಪಿಕಪ್ ಡಿಕ್ಕಿಯಾಗಿ ಮೊಪೆಡ್ ಸವಾರ ಮೃತಪಟ್ಟ ಘಟನೆ ಹೆದ್ರ ತಾಲೂಕಿನ ಚಾರ ಎಂಬಲ್ಲಿ ಸಂಭವಿಸಿದೆ. ಮೊಪೆಡ್ ಸವಾರ ಸೀತಾರಾಮ ಮೃತಪಟ್ಟಿದ್ದಾರೆ.
ಸೀತಾರಾಮ ಎಂಬವರು ಚಾರ ಕಡೆಯಿಂದ ತನ್ನ ಟಿವಿಎಸ್ ಎಕ್ಸೆಲ್ ಮೊಪೆಡ್ ನಲ್ಲಿ ಚಾರ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ವೇಳೆ ಪಿಕಪ್ ಚಾಲಕ ಜಗದೀಶ್ ಅತೀವೇಗವಾಗಿ ಓವರ್ ಟೇಕ್ ಮಾಡಿಕೊಂಡು ಹೋಗುವಾಗ ಪಿಕಪ್ ವಾಹನದ ಹಿಂಭಾಗವು ಮೊಪೆಡ್ ಸವಾರ ಸೀತಾರಾಮ ಅವರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

