ಉಡುಪಿ : ಗೋ ಕಳ್ಳತನ ಹಾಗೂ ಗೋಮಾಂಸ ಸಾಗಾಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಬಿದಿರೆಯ ಸಲೀಂ (38) ಗಂಗೊಳ್ಳಿಯ ಅಬ್ದುಲ್ ರಹೀಮ್ (35) ಬಂಧಿತರು. ಬಂಧಿತರಿಂದ ಒಂದು ಕಾರು ಹಾಗೂ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.
ಜೂ. 16ರಂದು ಬೆಳಗ್ಗಿನ ಜಾವ ಕಾರ್ಕಳದ ಬಜಗೋಳಿಯಲ್ಲಿರುವ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್‌ನಲ್ಲಿನ ಹಟ್ಟಿಯಲ್ಲಿರುವ 3 ದನಗಳು ಕಳ್ಳತನವಾಗಿದೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಲೀಂ ಬಂಧನವಾಗಿದ್ದರೆ ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಜೂ.21 ರಂದು ಹೊಸಾಡು ಗ್ರಾಮದ ಗುಹೇಶ್ವರ ದೇವಸ್ಥಾನಕ್ಕೆ ಹೋಗುವ ಕ್ರಾಸ್ ರಸ್ತೆಯಲ್ಲಿ ಮುಳ್ಳಿಕಟ್ಟೆಯಿಂದ ಗಂಗೊಳ್ಳಿ ಕಡೆಗೆ ತೆರಳುವ ವೇಳೆ ದ್ವಿಚಕ್ರ ವಾಹನದಲ್ಲಿ ರಹೀಂ 25 ಕೆಜಿ ಗೋ ಮಾಂಸ ಸಮೇತ ಸಿಕ್ಕಿಬಿದ್ದಿದ್ದಾನೆ. ಜೂ.18ರಂದು ಗಂಗೊಳ್ಳಿಯ ಕೆಇಬಿ ಕಚೇರಿ ಎದುರಲ್ಲಿದ್ದ ದನಗಳ ಕಾಣೆಯಾಗಿದೆ ಎಂದು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಪ್ರಕರಣದ ಆರೋಪಿ ಕೂಡ ರಹೀಂ ಆಗಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ

