Home » ಬಸ್‌ ಬ್ರೇಕ್‌ ಫೇಲ್‌ : 6 ಮಂದಿ ದುರ್ಮರಣ
 

ಬಸ್‌ ಬ್ರೇಕ್‌ ಫೇಲ್‌ : 6 ಮಂದಿ ದುರ್ಮರಣ

by Kundapur Xpress
Spread the love

ಕಾಸರಗೋಡು : ಕೆಎಸ್‌ಆರ್‌ಟಿಸಿ ಬಸ್‌ವೊಂದರ ಬ್ರೇಕ್ ಫೇಲಾದ ಕಾರಣ ವೇಗವಾಗಿ ಹಿಮ್ಮುಖ ಚಲಿಸಿ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಹರಿದು, ಆಟೋ ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೇರಳ-ಕರ್ನಾಟಕ ಗಡಿಯಲ್ಲಿರುವ ಕಾಸರಗೋಡಿನ ತಲ್ಲಪ್ಪಾಡಿಯಲ್ಲಿ ಸಂಭವಿಸಿದೆ. 

ಮೃತರನ್ನು ರಿಕ್ಷಾ ಚಾಲಕ, ಮುಳ್ಳುಗುಡ್ಡೆ ಅಜ್ಜಿನಡ್ಕ ನಿವಾಸಿ ಹೈದರ್‌ಆಲಿ (47), ಫರಂಗಿಪೇಟೆ ಪರಾರಿ ನಿವಾಸಿ ಅವ್ವಮ್ಮ (60), ಅಜ್ಜಿನಡ್ಕ ನಿವಾಸಿ ಖತೀಜ (60), ಅವರ ಸಹೋದರಿ ನಫೀಸಾ (52), ಅವರ ಪುತ್ರಿ ಆಯೇಷಾ ಫಿದಾ (19), ನಫೀಸಾ ಅಣ್ಣನ ಪುತ್ರಿ ಹಸ್ನಾ (5) ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕ ಹೊರತುಪಡಿಸಿ, ಉಳಿದವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.ಕಾಸರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!