ಕುಂದಾಪುರ: ನಗರದ ಬೊಬ್ಬರ್ಯನಕಟ್ಟೆ ದೇವಸ್ಥಾನದ ಎದುರುಗಡೆಯಲ್ಲಿ ಮಂಗಳವಾರ ಪ್ರೈಓವರ್ ನಿಂದ ಸರ್ವಿಸ್ ರಸ್ತೆಗೆ ಕಾರು ಮಗುಚಿದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕೇರಳ ಮೂಲದ ಮೋನವರ್ ಟಿ.ಪಿ.(49ವರ್ಷ) ರವರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ರಮ್ಹಾನ್ ಹಬ್ಬಕ್ಕಾಗಿ ಮುಂಬಯಿನಿಂದ ಕೇರಳ ರಾಜ್ಯದ ಮಾಯಿ ಎಂಬಲ್ಲಿಗೆ ಹೊರಟಿದ್ದ ಟೊಯೇಟೊ ಇನ್ನೋವಾ ಕಾರು ಇಲ್ಲಿನ ಬೊಬ್ಬರ್ಯನಕಟ್ಟೆ ಸಮೀಪ ಪ್ರೈಓವರ್ ಜೋಡಿಸುವ ಎಂಬ್ಯಾಂಕ್ಮೆಂಟ್ನ ಡಿವೈಡರ್ಗೆ ಬಡಿದು ಸರ್ವಿಸ್ ರಸ್ತೆಗೆ ಮಗುಚಿದ್ದು ಮಹಿಳೆ ಸಮೀರಾ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಪತಿ ಮೋನವರ್ ಟಿ.ಪಿ. ಮತ್ತು ಪುತ್ರ ಸೋಹಲ್ ಗಂಭೀರ ಗಾಯಗೊಂಡಿದ್ದು ಇಬ್ಬರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೋನವರ್ ಅಸುನೀಗಿದ್ದಾರೆ. ಸೋಹೆಲ್ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.