Home ಕರಾವಳಿ ಸುದ್ದಿಏ.17ಕ್ಕೆ ಕೋಲಾರ, ಮಂಡ್ಯದಲ್ಲಿ ರಾಹುಲ್ ಪ್ರಚಾರ

ಏ.17ಕ್ಕೆ ಕೋಲಾರ, ಮಂಡ್ಯದಲ್ಲಿ ರಾಹುಲ್ ಪ್ರಚಾರ

by Kundapur Xpress

ಬೆಂಗಳೂರು : ಎಐಸಿಸಿ ನಾಯಕ ರಾಹುಲ್ ಗಾಂಧಿ ಏ.17ರ ಬುಧವಾರ ರಾಜ್ಯಕ್ಕೆ ಆಗಮಿಸುತ್ತಿದ್ದು, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಅಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ರಾಹುಲ್ ಗಾಂಧಿಯವರು ರಾಜ್ಯ ನಾಯಕರೊಂದಿಗೆ ಮೊದಲು ಮಂಡ್ಯ ಜಿಲ್ಲೆಗೆ ತೆರಳಿ ಪಕ್ಷದ ಅಭ್ಯರ್ಥಿ ವೆಂಕಟರ ಮಣೇಗೌಡ (ಸ್ಟಾರ್ ಚಂದ್ರು) ಪರ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ. ನಂತರ ಸಂಜೆ ಕೋಲಾರಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಪರವಾಗಿ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಲಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವ ಯೋಜನೆಯೂ ಇದ್ದು, ಅದು ಇನ್ನೂ ಖಚಿತಗೊಂಡಿಲ್ಲ.

Related Articles